ವನ್ಯಜೀವಿಗಳ ಹಾವಳಿ ಹೆಚ್ಚಾಗಿ ಕಂಡುಬರುವ ದೇಲಂಬಾಡಿ ಪಂಚಾಯಿತಿನ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಿ, ಸೌರ ಬೇಲಿ, ಬೀದಿ ದೀಪ ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಒತ್ತಾಯಿಸಿದ್ದಾರೆ.ಬಿಜೆಪಿ ದೇಲಂಪಾಡಿ ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿ ಪರಪ್ಪದಲ್ಲಿರುವ ಅರಣ್ಯ ಇಲಾಖೆ ಮರದ ಡಿಪೋದಲ್ಲಿ ನಡೆದ ಧರಣಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು .
ಕಾಡು ಪ್ರಾಣಿಗಳ ದಾಳಿಯಿಂದ ಬೆಳೆಗಳು ಹಾನಿಗೊಳಗಾದಾಗ, ಕೇವಲ ಅತ್ಯಲ್ಪ ಪರಿಹಾರವನ್ನು ಮಾತ್ರ ನೀಡಲಾಗುತ್ತದೆ. ಈ ಮೊತ್ತ ಫಲಾನುಭವಿಗಳಿಗೆ ಸಿಗುವಾಗ ಬಹಳಷ್ಟು ವಿಳಂಬವು ಆಗುತ್ತದೆ . ಉದುಮ ಕ್ಷೇತ್ರದಲ್ಲಿ ಕಾಡು ಪ್ರಾಣಿಗಳ ದಾಳಿ ನಡೆಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಲು ಸ್ಥಳೀಯ ಶಾಸಕರು ಸಿದ್ಧರಾಗಿರಬೇಕು ಎಂದು ಅವರು ವಿನಂತಿಸಿದರು.
ದೇಲಂಪಾಡಿ ಕ್ಷೇತ್ರ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಳಿಯಾರ್ ಮಂಡಲ ಅಧ್ಯಕ್ಷ ದಿಲೀಪ್ ಪಲ್ಲಂಚಿ, ಚಂದ್ರಶೇಖರನ್, ಶಿವರಾಮ, ಉದಯ ಮುಂತಾದವರು ಮಾತನಾಡಿದರು.