ವೈದ್ಯರು ಹಾಗೂ ಸಿಬ್ಬಂದಿಗಳು ಸಾಕಷ್ಟು ಇಲ್ಲದೆ ರಾತ್ರಿ ಹೊತ್ತಿನ ಚಿಕಿತ್ಸೆಯನ್ನು ಸ್ಥಗಿತಗೊಳಿಸಿರುವ ಮಂಜೇಶ್ವರ ತಾಲೂಕು ಹೆಡ್ ಕ್ವಾಟರ್ಸ್ ಆಸ್ಪತ್ರೆಗೆ ಇಂಡಿಯನ್ ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿಯ ನೇತೃತ್ವದಲ್ಲಿ ಇಂದು ಪ್ರತಿಭಟನಾ ಮಾರ್ಚ್ ಹಾಗೂ ಧರಣಿ ನಡೆಯಿತು. ನಾಯಬಜಾರ್ ನಲ್ಲಿರುವಆಸ್ಪತ್ರೆ ಗೆ ಯೂತ್ ಕಾಂಗ್ರೆಸ್ ಅಸೆಂಬ್ಲಿ ಸಮಿತಿಯ ಅಧ್ಯಕ್ಷ ಜುನೈದ್ ಉರ್ಮಿ ಇವರ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಸದಸ್ಯ ಹಕ್ಕಿಂ ಕುನ್ನಿಲ್ ಧರಣಿಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕೇರಳ ರಾಜ್ಯ ಸರ್ಕಾರ ಆರೋಗ್ಯ ರಂಗದಲ್ಲಿ ಪೂರ್ಣ ವಿಫಲಗೊಂಡಿದ್ದು, ಗ್ರಾಮೀಣ ಸ್ಥಳ ದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿಯನ್ನು ಮಾಡದೆ ರೋಗಿಗಳನ್ನು ಸಂಕಷ್ಟಕ್ಕೀಡುಮಾಡಿದೆ. 9 ವೈದ್ಯರು ಇರಬೇಕಾದ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಕೇವಲ ಎರಡು ವೈದ್ಯರುಗಳಸೇವೆ ಲಭಿಸುತ್ತಿದ್ದು ಪ್ರತಿನಿತ್ಯ ಸಾವಿರಾರು ರೋಗಿಗಳು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಅವರ ಹಿತದೃಷ್ಟಿಯಿಂದ ತಕ್ಷಣವೇ ವೈದ್ಯರ ನೇಮಕಾತಿಯನ್ನು ಮಾಡುವಂತೆ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಉಪಾಧ್ಯಕ್ಷ ಬಿ.ಪಿ ಪ್ರದೀಪ್ ಕುಮಾರ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕೇಯನ್, ಮಾಜಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಐ ಏನ್ ಟಿ ಯು ಸಿ ಬ್ಲಾಕ್ ಅಧ್ಯಕ್ಷ ಸತ್ಯನ್ ಸಿ.ಉಪ್ಪಳ, ಶರೀಲ್ ಕಯಾಂಕುಡೇಲು, ಅಹಮದ್ ಮನ್ಸೂರ್ ಬಿ.ಎಮ್, ಇರ್ಷಾದ್ ಮಂಜೇಶ್ವರ, ಫಾರೂಕ್ ಶಿರಿಯಾ, ಬಾಬು ಬಂದಿಯೊಡು, ಸುಲೇಮಾನ್ ಊಜಂಪದವು, ಸಾದರ್ ಹುಸೈನ್, ಖದೀಜತ್ ನಬಿಹಾ, ಪಿ.ಎಂ ಖಾದರ್, ಕರೀಂ ಪೂನಾ, ಹಾರಿಸ್, ನವೀನ್ ಶೆಟ್ಟಿ ಮಂಗಲ್ಪಾಡಿ, ಕೇಶವ ಪುತ್ತಿಗೆ, ದಯಾನಂದ ಬಾಡೂರು, ರಾಕೇಶ ರೈ, ರಶೀದ್ ಮಂಜೇಶ್ವರ, ರವಿರಾಜ್ ಮುಂತಾದವರು ಉಪಸ್ಥಿತರಿದ್ದರು. ಮೊಹಮ್ಮದ್ ಮಲಂಗರೆ ಸ್ವಾಗತಿಸಿ ಪೃಥ್ವಿರಾಜ ಶೆಟ್ಟಿ ವಂದಿಸಿದರು.