ಹಿರಿಯ ಕಾಂಗ್ರೆಸ್ ನಾಯಕ ಕೆಪಿಸಿಸಿ ಮಾಜಿ ಅಧ್ಯಕ್ಷ ತೆನ್ನಾಲ ಬಾಲಕೃಷ್ಣ ಪಿಳ್ಳೈ ಇನ್ನಿಲ್ಲ

ತಿರುವನಂತಪುರ: ಕೇರಳದ ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ಕೆಪಿಸಿಸಿ ಅಧ್ಯಕ್ಷ ತೆನ್ನಲ ಬಾಲಕೃಷ್ಣ ಪಿಳ್ಳೆ(95)ನಿಧನರಾದರು.
ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜವಾಗಿ ಅವರು ವಿಧಿವಶರಾದರು.

ಮೂರು ಬಾರಿ ರಾಜ್ಯಸಭಾ ಸಂಸದ, ಎರಡು ಬಾರಿ ಶಾಸಕ, ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಕಾಂಗ್ರೆಸ್ಸಿನ ವರ್ಚಸ್ವೀ, ಸೌಮ್ಯ ನಾಯಕನೆಂದು ಜನಪ್ರಿಯರು.


ಕೊಲ್ಲಂ ಜಿಲ್ಲೆಯ ಶೂರನಾಡ್ ನಿವಾಸಿಯಾದ ಅವರು ಸಹಕಾರಿ ರಂಗದ ಜನಪ್ರಿಯ ನಾಯಕ. 1931ರಲ್ಲಿ ಶೂರನಾಡಿನ ತೆನ್ನಲ ಮನೆಯ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದ್ದ ಅವರು ತಿರುವನಂತಪುರ ಎಂ.ಜಿ.ಕಾಲೇಜಿನಿಂದ ಬಿಎಎಸ್ಸಿ ಪದವೀಧರನಾಗಿ ಶೂರನಾಡ್ ವಾರ್ಡು ಸಮಿತಿ ಸದಸ್ಯನಾಗಿ ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟಿದ್ದರು. 1972ರಲ್ಲಿ ಕೊಲ್ಲಂ ಡಿಸಿಸಿ ಅಧ್ಯಕ್ಷರಾಗಿ, ಬಳಿಕ ಕೆಪಿಸಿಸಿ ಕಾರ್ಯದರ್ಶಿ, ಅಧ್ಯಕ್ಷರಾಗಿ ಉನ್ನತ ಸ್ಥಾನಮಾನ ಪಡೆದ ಅವರು ಗತಕಾಲದ ಕೇರಳದ ಪ್ರಮುಖ ರಾಜಕಾರಣಿಗಳ ಒಡನಾಡಿ. ಮೃತರು ಪತ್ನಿ ಸತೀದೇವಿ, ಮಗಳು ನೀತ ಎಂಬಿವರನ್ನಗಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!