ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದ ಸಮೀಪವಿರುವ ಸುರುಮ ತೋಡು ಮಳೆಗಾಲಕ್ಕೆ ಮುಂಚಿತವಾಗಿ ಪಂಚಾಯತು ಅಧಿಕೃತರು ಶುಚೀಕರಿಸಲು ಮುಂದಾಗದ ಹಿನ್ನೆಲೆಯಲ್ಲಿ ಈ ಸಲ ಸುರಿದ ಮೊದಲ ಮಳೆಗೆ ಮಳೆ ನೀರು ಹರಿದು ಹೋಗಲು ಸೂಕ್ತವಾದ ತೋಡಿನ ಅಥವಾ ಚರಂಡಿ ವ್ಯವಸ್ಥೆಯನ್ನು ಕಲ್ಪಿಸದ ಹಿನ್ನೆಲೆಯಲ್ಲಿ ಸಮೀಪ ಪ್ರದೇಶದ ಮನೆಗಳು ಪ್ರಾರ್ಥನಾ ಮಂದಿರಗಳಿಗೆ ನೀರು ನುಗ್ಗಿ ಭಾರೀ ನಾಶ ನಷ್ಟ ಸಂಭವಿಸಿದೆ.
ಮಳೆಗಾಲಕ್ಕೆ ಮೊದಲೇ ಪಂಚಾಯಿತು ವತಿಯಿಂದ ನಡೆಸಬೇಕಾದ ಶುಚೀಕರಣ ನಡೆದಿಲ್ಲ ಎಂಬುದು ಇಲ್ಲಿಯ ಸ್ಥಳೀಯರ ಆರೋಪ. ಜೊತೆಯಾಗಿ ಈ ಪ್ರದೇಶದ ಬಹುತೇಕ ಮನೆಗಳ ಹಾಗೂ ವ್ಯಾಪಾರ ಕೇಂದ್ರಗಳ ತ್ಯಾಜ್ಯಗಳನ್ನು ಇಲ್ಲೇ ತಂದು ಹಾಕುತ್ತಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ.
ಇದೆಲ್ಲಾ ಕಟ್ಟಿ ನಿಂತು ನೀರು ಹೋಗಲು ವ್ಯವಸ್ಥೆ ಇಲ್ಲದೆ ಯಾವತ್ತೂ ಕಾಣದ ನೆರೆ ಈ ಸಲ ಮಂಜೇಶ್ವರ ಪರಿಸರದಲ್ಲಿ ಕಂಡು ಬಂದಿದೆ.
ಮಳೆಗಾಲಕ್ಕೆ ಮೊದಲೇ ಅಧಿಕೃತರು ಸ್ವಚ್ಛತೆಗೆ ಮುಂದಾಗಿಲ್ಲ, ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮವಿಲ್ಲ ಎಂಬುದು ಜನರ ಅಭಿಪ್ರಾಯ.ಸುರುಮ ತೋಡಿನಲ್ಲಿ ಸಾಂದ್ರವಾಗಿ ತ್ಯಾಜ್ಯ ವಸ್ತುಗಳು ಜಮಾಯಿಸಿಕೊಂಡಿದ್ದು, ನೀರು ಹರಿಯಲು ಯಾವುದೇ ಜಾಗವಿಲ್ಲದಂತೆ ಮಾಡಿದೆ.
ಈ ಸಲ ಸುರಿದ ಮಳೆಗೆ ಹಲವಾರು ಮನೆಗಳಲ್ಲಿ ದಾಖಲೆ ಪತ್ರಗಳು, ಅಡುಗೆ ಮನೆ, ಹಾಸಿಗೆ, ವಿದ್ಯುತ್ ಸಾಧನಗಳಿಗೆ ಹಾನಿಯಾಗಿದೆ..
ಕೆಲವು ಪ್ರಾರ್ಥನಾ ಮಂದಿರಗಳ ಒಳಗೆ ನೀರು ನುಗ್ಗಿದ್ದು ಧಾರ್ಮಿಕ ಚಟುವಟಿಕೆಗಳಿಗೆ ಅಡಚಣೆಯಾಗಿವೆ.
ಮಳೆ ಪ್ರಮಾಣ ಅಲ್ಪ ಕಮ್ಮಿಯಾಗಿದ್ದರೂ ಈಗಲೂ ಚರಂಡಿಯಲ್ಲಿ ತ್ಯಾಜ್ಯ ಶೇಖರಣೆಗೊಂಡಿರುವುದರಿಂದ ನೀರು ಅಲ್ಲೇ ಕಟ್ಟಿ ನಿಂತಿದೆ.ತಕ್ಷಣ ಗ್ರಾಮ ಪಂಚಾಯತ್ ಅಥವಾ ಸ್ಥಳೀಯ ನಿಗಮದಿಂದ ಸುರುಮ ತೋಡಿನ ನೀರು ಹರಿಯುವ ಮಾರ್ಗಗಳನ್ನು ತೆರೆಯಬೇಕಾದದ್ದು ಅನಿವಾರ್ಯವಾಗಿದೆ.
ಮಳೆಯ ಕಾಲದಲ್ಲಿ ಈ ರೀತಿ ಸಮಸ್ಯೆ ಆಗದಂತೆ ಚರಂಡಿ ಮತ್ತು ನೀರು ಹರಿಯುವ ಮಾರ್ಗಗಳಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ಮಳೆಗಾಲ ಪ್ರಾರಂಭದಲ್ಲಿಯೇ ಆದ ಈ ಘಟನೆ ಮುಂದಿನದಿನಗಲ್ಲಿ ಭಾರಿ ಆತಂಕವನ್ನು ಸೃಷ್ಟಿಸಲಿದೆ ಕೂಡಲೆ ಇದಕ್ಕೊಂದು ಕ್ರಮ ಕೈಗೊಳ್ಳದಿದ್ದರೆ ಈ ಸಮಸ್ಯೆ ಇನ್ನಷ್ಟು ತೀವ್ರವಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಎಂದು ಸ್ಥಳೀಯರ ಆತಂಕವಾಗಿದೆ.