ಶ್ರೀ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ ನ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಬಡಮಕ್ಕಳಿಗೆ ಕಲಿಕೋಪಕರಣ ವಿತರಣೆ

ಮಂಜೇಶ್ವರ : ಶ್ರೀ ರಾಜ ಬೆಳ್ಳಪ್ಪಾಡ ಸೇವಾ ಟ್ರಸ್ಟ್ ಉದ್ಯಾವರ ಮಾಡ ಇದರ ವತಿಯಿಂದ ಸಂಸ್ಥೆಯ 7 ನೇ ವರ್ಷದ ವಾರ್ಷಿಕೋತ್ಸವ ದ ಅಂಗವಾಗಿ ಬಡ ಶಾಲಾ ಮಕ್ಕಳ ಕಲಿಕೆಗೆ ಬೇಕಾದ ಸಾಮಾಗ್ರಿಗಳ ಕಿಟ್ ಳನ್ನು ಉದ್ಯಾವರ ಮಾಡದ ಸತ್ಯ ದೈವಗಳ ಭಂಡಾರ ಮನೆಯಲ್ಲಿ ಪ್ರಾರ್ಥನೆ ಮಾಡಲಾಯಿತು. ಬಳಿಕ ಅನ್ಯ ರಾಜ್ಯದ ವಲಸೆ ಕಾರ್ಮಿಕರ ಬಡ ಮಕ್ಕಳೇ ತುಂಬಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಲಪಾಡಿಯ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಲಾಯಿತು.


ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಗದರ್ಶಕ ರಾಜ ಬೆಳ್ಳಪ್ಪಾಡರವರು ಪ್ರಾರ್ಥಿಸಿ ಬಡ ಕುಟುಂಬಗಳ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸುವ ಅಧ್ಯಾಪಕ ವೃಂದವನ್ನ ಶ್ಲಾಘಿಸಿ ಸಂಸ್ಥೆಯ ದಾನಿಗಳ ಮತ್ತು ಸಂಸ್ಥೆಯ ಕಾರ್ಯ ವೈಖರಿಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು.

ಪ್ರೇಮ ರಾಜ ಬೆಳ್ಳಪ್ಪಾಡ, ಗೌರವ ಮಾರ್ಗದರ್ಶಕ ಸಂಜೀವ ಶೆಟ್ಟಿ ಮಾಡ, ಉಪಾಧ್ಯಕ್ಷ ನಳಿನಾಕ್ಷ ಆಚಾರ್ಯ ಮಂಜೇಶ್ವರ, ಪ್ರದಾನ ಕಾರ್ಯದರ್ಶಿ ಜಯರಾಜ ಶೆಟ್ಟಿ ಕುಳೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ ಉದ್ಯಾವರ, ಜೊತೆ ಕಾರ್ಯದರ್ಶಿ ಯೋಗಿತ ಉದ್ಯಾವರ, ರಾಜೇಶ ಅಣ್ಣಪ್ಪರ ಹಿತ್ತಿಲು, ಶಾಲಾ ಅಧ್ಯಾಪಕವೃಂದ ಮುಂತಾದವರು ಉಪಸ್ಥಿತರಿದ್ದರು.ಜಯರಾಜ ಶೆಟ್ಟಿ ಸ್ವಾಗತಿಸಿ ಶಾಲಾ ಅಧ್ಯಾಪಕರಾದ ಶ್ರೀಜಿತ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!