ಮಂಜೇಶ್ವರ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ
ಮೀಂಜ ಪಂಚಾಯತ್‌ನ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್‌ನ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬಳಿಯಲ್ಲಿನ ಕೆಳಭಾಗದಲ್ಲಿ ಗುಡ್ಡೆ ಕುಸಿದು ಯಾವುದೇ ಕ್ಷಣದಲ್ಲಿ ಮನೆ ಧಾರಾಶಾಹಿಗೊಳ್ಳು ಭೀತಿ ಉಂಟಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಇದರಿಂದ ಮನೆಯ ಸುತ್ತು ಕಲ್ಲಿನ ಆವರಣಗೋಡೆ ಸಂಪೂರ್ಣ ಕುಸಿದು ಹೋಗಿ ಮನೆ ಅಡಿಪಾಯ ಬಳಿ ತನಕ ತಲುಪಿದ್ದು, ಇದೀಗ ಕುಟುಂಬ ಸ್ಥಳಾಂತರಗೊಂಡಿದ್ದಾರೆ.
ಇದೇ ವೇಳೆ ತೋಟದಲ್ಲಿರುವ ಬಾವಿ, ಮೋಟಾರ್ ಪಂಪು ಸಹಿತ ಅಡಿಕೆ,ತೆಂಗು, ರಬ್ಬರ್ ಕೃಷಿ ಸಂಪೂರ್ಣ ನಾಶಗೊಂಡಿದೆ. ಅಲ್ಲದೆ ಹಲವು ವಿದ್ಯುತ್ ಕಂಬಗಳು ಕೂಡಾಹಾನಿಗೊಂಡಿದೆ. ಭಾರೀ ಪ್ರಮಾಣದ ನಾಶ ನಷ್ಟ ಸಂಭವಿಸಿದೆ.
ಘಟನೆ ಸ್ಥಳಕ್ಕೆ ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಉಪಾಧ್ಯಾಕ್ಷ ಜಯರಾಮ ಬಲ್ಲಂಗುಡೇಲ್, ಅಸಿಸ್ಟೆಂಟ್ ಕಾರ್ಯದರ್ಶಿ ನಾರಾಯಣ, ವಾರ್ಡ್ ಸದಸ್ಯೆ ಕುಸುಮ ಮೋಹನ್, ವಿಲೇಜ್, ಕೃಷಿ ಅಧಿಕಾರಿಗಳು, ವಿವಿಧ ವಾರ್ಡ್ ಸದಸ್ಯರುಗಳು ಸ್ಥಳ ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ಮೀಯಪದವು ಶಾಲೆಯ ಅಧ್ಯಾಪಕರು ಹಾಗೂ ಸ್ಥಳೀಯರು ಭೇಟಿ ನೀಡಿದ್ದಾರೆ.