ಪುಸ್ತಕ ಓದುವಿಕೆಯು ಮೆದುಳಿನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ: ಹ.ಸು ಒಡ್ಡಂಬೆಟ್ಟು.

ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಮೂಡಂಬೈಲು ಇಲ್ಲಿ ಕೇರಳದ ಗ್ರಂಥ ಶಾಲಾ ಸ್ಥಾಪಕರಾದ ಶ್ರೀ ಪಿಎನ್ ಪಣಿಕ್ಕರ್ ಅವರ ಚರಮ ದಿನವಾದ ಜೂನ್ 19ರ ವಾಚನ ದಿನದ ಭಾಗವಾಗಿ ಶಾಲೆಯಲ್ಲಿ ವಾಚನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. .ಕಾರ್ಯಕ್ರಮದ ಉದ್ಘಾಟನೆಯನ್ನು ಹ. ಸು ಒಡ್ದಂಬೆಟ್ಟು ಎಂದು ಜನಪ್ರಿಯರಾಗಿರುವ ಚುಟುಕು ಕವಿ, ಅಧ್ಯಾಪಕ ಶ್ರೀಯುತ ಹರೀಶ್ ಸುಲಾಯರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಓದುವಿಕೆ ಕಡಿಮೆಯಾಗುತ್ತಾ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಓದುಕೆಯಿಂದಾಗಿ ಬುದ್ಧಿಯ ಬೆಳವಣಿಗೆ ಜೊತೆಗೆ ಜ್ನಾನದ ವಿಕಾಸವಾಗುತ್ತದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಬಿ ಆರ್ ಸಿ ಕೋರ್ಡಿನೇಟರ್ ಆದ ಶ್ರೀಮತಿ ಮೋಹಿನಿ ಟೀಚರ್ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದಯಾವತಿ ಟೀಚರ್ ಅತಿಥಿಗಳನ್ನು ಸ್ವಾಗತಿಸಿದರು.

ರಹನಾ ಟೀಚರ್ ದನ್ಯವಾದ ಸಮರ್ಪಿಸಿದರು. ಅಧ್ಯಾಪಕರುಗಳಾದ ಶ್ರೀ ಪ್ರತೀಕ್ ಸರ್,ಜಯಪ್ರಕಾಶ್,ರಾಜೇಶ್ ಕೊಡ್ಲಮೊಗರು,ಮೋಹಿನಿ ಟೀಚರ್,ಸವಿತಾ ಟೀಚರ್,ನಿವೇದಿನಿ, ತ್ರಿಲತ, ರಮ್ಲಾ ಟೀಚರ್, ಅಂಜಲಿ, ಲಿಜಿನ, ಶೈನಿ , ಆರೂನ್ ಮೊದಲಾದವರು ಸಹಕರಿಸಿದರು.
ಸುಷ್ಮ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ವಿವಿಧ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಏರ್ಪಡಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!