ನಿರಂತರ ಓದುವಿಕೆಯಿಂದ ಸತ್ಪ್ರಜೆಗಳಾಗಲು ಸಾಧ್ಯ .ಶಾಸಕ ಎ ಕೆ ಎಂ ಅಶ್ರಫ್

ಮಂಜೇಶ್ವರ : ನಿತ್ಯ ಜೀವನದಲ್ಲಿ ನಿರಂತರ ಓದುವಿಕೆಯಿಂದ ನಮ್ಮ ಜ್ಞಾಪಕಾ ಶಕ್ತಿ ವೃದ್ಧಿ ಗೊಳ್ಳುವುದರ ಜೊತೆಗೆ ನಾಗರೀಕ ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಾಧ್ಯವೆಂದು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಹೇಳಿದ್ದಾರೆ.


ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ನಡೆದ ವಾಚನಾ ಪಕ್ಷಾಚಾರಣೆಯ ತಾಲೂಕೂ ಮಟ್ಟದ ಉಧ್ಘಾಟಾನಾ ಸಮಾರಂಭ ಹಾಗೂ ಪಿ ಏನ್ ಪಣಿಕ್ಕರ್ ಮತ್ತು ದಿವಂಗತ ದಿನೇಶ್ ವಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು.


ಜಿ ಎಚ್ ಎಸ್ ಎಸ್ ಬಂಗ್ರ ಮಂಜೇಶ್ವರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ ದಿಲೀಪ್ ಕುಮಾರ್ ಮುಖ್ಯ ಭಾಷಣ ಮಾಡಿದರು.ಮಂಜೇಶ್ವರ ತಾಲೂಕೂ ಲೈಬ್ರರಿ ಕೌನ್ಸಿಲ್ ಅಧ್ಯಕ್ಷೆ ಶ್ರೀ ಕುಮಾರಿ ಟೀಚರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮಂಜೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಮಂಜೇಶ್ವರ ಎ ಇ ಓ ಜೋರ್ಜ್ ಕ್ರಾಸ್ತಾ ,ಕಾಸರಗೋಡು ಜಿ ಪ ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ ಕೆ ಮೊಹಮ್ಮದ್ ಹುಸೇನ್ , ಶ್ರೀಮತಿ ಶಬ್ನಾಸ್ ,ಶ್ರೀಮತಿ ಗಾಯತ್ರಿ ಟೀಚರ್ ,ಶ್ರೀಮತಿ ಸಂಸೀನ ,ಅಶ್ರಫ್ ಬಿ ಎಂ ,ಬಾಲಕೃಷ್ಣ ಶೆಟ್ಟಿಗಾರ್ ,ಎಂ ಪ್ರಭಾಕರ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.ಮಂಜೇಶ್ವರ ತಾಲೂಕೂ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ ಕಮಲಾಕ್ಷ ಸ್ವಾಗತಿಸಿ , ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಸುಧಾಕರ ಮಾಸ್ಟ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!