ಮಂಜೇಶ್ವರ: ಧಾರ್ಮಿಕ, ಸಾಮಾಜಿಕ, ಕ್ರೀಡಾ, ಸಾಂಸ್ಕೃತಿಕ ರಂಗದ ಮುಂದಾಳು ತುಳಸಿದಾಸ್ ಮಂಜೇಶ್ವರ ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ಸಂಜೆ ಹೊಸಂಗಡಿ ಗೇಟ್ ವೇ ಸಭಾಂಗಣದಲ್ಲಿ ನಡೆದ ಬಾಕುಡ ಸಮಾಜದ ಕೇಂದ್ರ ಸಮಿತಿಯ ಸಭೆಯಲ್ಲಿ ಸಮಾಜದ ಹಿರಿಯರ ಸಮಕ್ಷಮದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡು, ಅಧಿಕಾರವನ್ನ ಪಡಕೊಂಡರು.
ತುಳಸಿದಾಸ್ ಮಂಜೇಶ್ವರ್ ರವರು ಪ್ರಸ್ತುತ ರೈಲ್ವೆ ಇಲಾಖೆಯಲ್ಲಿ ಕಳೆದ 15 ವರ್ಷಗಳಿಂದ ಉದ್ಯೋಗಿಯಾಗಿದ್ದು, ಮಂಜೇಶ್ವರ ಚೌಕಿಯಲ್ಲಿರುವ ಬ್ರೈಟ್ ಆರ್ಟ್ಸ್ & ಸ್ಪೋರ್ಟ್ಸ್ ಸೋಶಿಯಲ್ ವೆಲ್ವೇರ್ ಕ್ಲಬ್ಬಿನ ಮಾಜಿ ಅಧ್ಯಕ್ಷರಾಗಿ, ಮಂಜೇಶ್ವರ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿ, ತುಳುನಾಡ ಬಾಲೆ ಬಂಗಾರ್ ಮಂಜೇಶ್ವರ ಸಮಿತಿ ಪಧಾಧಿಕಾರಿಯಾಗಿ, ಮಂಜೇಶ್ವರ ಜೈಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಪ್ರಾರಂಭದಲ್ಲಿ ಪಧಾಧಿಕಾರಿಯಾಗಿ, ಶ್ರೀ ರಾಜ ಬೆಳ್ಳಪ್ಪಾಡ ಸೇವಾ ಬಳಗದ ಸ್ಥಾಪಕರಲ್ಲಿ ಓರ್ವರಾಗಿದ್ದರು. ಭಾರತೀಯ ರೈಲ್ವೆ ಮಜದೂರು ಸಂಘದ ಪಾಲ್ಘಾಟ್ ವಿಭಾಗದ ಅಧ್ಯಕ್ಷರಾಗಿ, ಕುಂಬಳೆ ಆರಿಕ್ಕಾಡಿ ಶ್ರೀ ಧೂಮಾವತಿ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಬಾಕುಡ ಸಮಾಜ ಕೇಂದ್ರ ಸಮಿತಿಯಲ್ಲಿ ಏಳು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ್ದರು. ಇದೀಗ ಪ್ರಸ್ತುತ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಾಕುಡ ಸಮಾಜದಲ್ಲಿ ಇದೀಗ ಸಂತಸ ಸಂಭ್ರಮ ಮಾಡಿದೆ.