ಮಂಜೇಶ್ವರ: ಬಾಕುಡ ಸಮಾಜ ಸೇವಾ ಸಮಿತಿಯ ಮಹಾಸಭೆ ಇತ್ತೀಚಿಗೆ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ಜರಗಿತು.
ಸಭೆಯನ್ನು ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಒಕ್ಕೂಟದ ಅಧ್ಯಕ್ಷರಾದ ಶಂಕರ ಅಡ್ಕ ಉಧ್ಘಾಟಿಸಿದರು.ಸಭೆಯಲ್ಲಿ ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಣೇಶ್ ಮಂಗಳೂರು ,ಅಧ್ಯಕ್ಷೆ ಶ್ರೀಮತಿ ಸುಜಾತ ಮಂಜೇಶ್ವರ , ಗೌರವಾಧ್ಯಕ್ಷ ವಿಜಯ ಪಂಡಿತ್ ಮಂಗಲ್ಪಾಡಿ,ಕೋಶಾಧಿಕಾರಿ ಮಂಜುನಾಥ್ ಕಾರ್ಲೆ ,ರಾಮ ಕಿನ್ನಿಗೋಳಿ , ಕಾರ್ಯದರ್ಶಿ ತುಳಸೀದಾಸ್ ಮಂಜೇಶ್ವರ, , ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷರಾದ ನವೀನ ಮಂಗಳೂರು , ಪ್ರಧಾನ ಕಾರ್ಯದರ್ಶಿ ಇಂದಿರಾ ನಾಗೇಶ್ ಹಾಗೂ ಹದಿನೆಂಟು ದೈವಸ್ಥಾನಗಳ ದೈವದ ಪಾತ್ರಿಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.
ಬಳಿಕ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.ಸಮಿತಿಯ ನೂತನ ಅಧ್ಯಕ್ಷರಾಗಿ ತುಳಸೀದಾಸ್ ಮಂಜೇಶ್ವರ ,ಪ್ರಧಾನ ಕಾರ್ಯದರ್ಶಿಯಾಗಿ ಸುಮಂಗಲ ಪೊಸೋಟು ,ಉಪಾಧ್ಯಕ್ಷರಾಗಿ ಪ್ರಿಜ್ಜು ಬಳ್ಳಾರ್, ಕೋಶಾಧಿಕಾರಿಯಾಗಿ ಹರೀಶ್ ಮಾಸ್ಟರ್ ಅಂಗಡಿಪದವು ,ಕ್ರೀಡಾ ಕಾರ್ಯದರ್ಶಿಯಾಗಿ ಅರುಣ್ ಪೊಸೋಟು ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಂಜು ಸಂತಡ್ಕ , ಲೆಕ್ಕ ಪರಿಶೋಧಕರಾಗಿ ಕೃಷ್ಣ ಬಿ ಕೆ , ಸಲಹೆಗಾರರಾಗಿ ವಿಜಯ ಪಂಡಿತ್ ಮಂಗಲ್ಪಾಡಿ , ಶಿವಾನಂದ ಮಂಗಲ್ಪಾಡಿ , ಹೆಲ್ಪ್ ಗ್ರೂಪ್ ಸಂಘಟನಾ ಕಾರ್ಯದರ್ಶಿಯಾಗಿ ಜೆ.ಪಿ ಮಂಜೇಶ್ವರ, ಜೊತೆ ಕಾರ್ಯದರ್ಶಿಗಳಾಗಿ ಸುನಿತಾ ಮಂಗಳೂರು,ರಘುರಾಮ್ ಛತ್ರಂಪಳ್ಳ ಪ್ರಚಾರ ಸಮಿತಿ ಕಾರ್ಯದರ್ಶಿಯಾಗಿ ಶರತ್ ಬೇಕೂರು ಇವರನ್ನು ಆರಿಸಲಾಯಿತು.
ಕಾರ್ಯಕ್ರಮವನ್ನು ಸುರೇಶ್ ಮಂಗಲ್ಪಾಡಿ ನಿರೂಪಿಸಿದರು.ತುಳಸೀದಾಸ್ ಮಂಜೇಶ್ವರ ಸ್ವಾಗತಿಸಿ ಜೆ ಪಿ ಮಂಜೇಶ್ವರ ವಂದಿಸಿದರು.