ತುಳುವೆರೆ ಉಡಲ್ ಜೋಡುಕಲ್ಲು ಇದರ ಕಲಾವಿದರಿಂದ ಗಡಿನಾಡ ಕೇಸರಿ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ಮಾಣ ಮತ್ತು ನಿರ್ವಹಣೆಯ , ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿ ನಿರ್ದೇಶಿಸಿದ ಹೊಚ್ಚ ಹೊಸ ನಾಟಕ ಡೆನ್ನ ಡೆನ್ನಾನ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶುಭ ಮುಹೂರ್ತಗೊಂಡಿತು.
ವಿವೇಕ್ ಭಂಡಾರಿ ಸಣ್ಣತಡ್ಕ ಸಲಹೆ ಮತ್ತು ಸಹಕಾರ ನೀಡಿದ ಈ ನಾಟಕವು ತುಳು ರಂಗ ಭೂಮಿಯಲ್ಲಿ ವಿಶಿಷ್ಟಕಥೆಯಿಂದ ಎಲ್ಲರ ಮನಸೂರೆಗೊಂಡ ಯಶಸ್ವಿ ತುಳು ನಾಟಕ ಇದೀಗ ಹಲವು ಬದಲಾವಣೆಗಳೊಂದಿಗೆ ಹೊಸ ಶೈಲಿಯಲ್ಲಿ ಮೂಡಿ ಬರಲಿದೆ.
ಶುಭಮೂಹೂರ್ತ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರು ,ಆಡಳಿತ ಮೊಕ್ತೇಸರಾದ ಕೋಡಿಬೈಲ್ ನಾರಾಯಣ ಹೆಗ್ಡೆ, ಸೇವಾ ಸಮಿತಿ ಸದಸ್ಯರಾದ ಭರತ್ ರೈ ಕೋಡಿಬೈಲ್, ಮತ್ತು ತಂಡದ ಎಲ್ಲಾ ಕಲಾವಿದರು ಉಪಸ್ಥಿತರಿದ್ದರು.