ನಗರಸಭೆಯ ಭ್ರಷ್ಟಾಚಾರ ಪ್ರತಿಭಟಿಸಿ ಬಿಜೆಪಿ ಮಾರ್ಚ್ ಪೋಲೀಸರಿಂದ ಸತತ ಎರಡನೇ ದಿನವೂ ಜಲಫಿರಂಗಿ ಪ್ರಯೋಗ.

ಕಾಸರಗೋಡು ನಗರದಲ್ಲಿ ಸತತ ಎರಡನೆಯ ದಿನವೂ ಬಿಜೆಪಿ ಪ್ರತಿಭಟನಾ ಮಾರ್ಚ್ ವಿರುದ್ಧ ಪೋಲೀಸ್ ಜಲಫಿರಂಗಿ ಪ್ರಯೋಗ ನಡೆಯಿತು. ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಗೆ ನಡೆಸಿದ ಮಾರ್ಚ್ ವಿರುದ್ದ ಜಲಫಿರಂಗಿ ಪ್ರಯೋಗ ನಡೆದರೆ ಇಂದು ಬೆಳಿಗ್ಗೆ ನಗರಸಭಾ ಕಾರ್ಯಾಲಯಕ್ಕೆ ನಡೆಸಿದ ಮಾರ್ಚ್ ತಡೆದು ಜಲಫಿರಂಗಿ ಪ್ರಯೋಗ ನಡೆಯಿತು.

ಕಾಸರಗೋಡು ನಗರಸಭೆಯ ಅಭಿವೃದ್ಧಿ ರಹಿತ ಭಷ್ಟಾಚಾರಗಳಿಂದ ಕಂಗೆಟ್ಟ ಮುಸ್ಲಿಂಲೀಗ್ ಆಡಳಿತವನ್ನು ಪ್ರತಿಭಟಿಸಿ ಬಿಜೆಪಿ ಪ್ರತಿಭಟನಾ ಮಾರ್ಚ್ ಹಮ್ಮಿಕೊಂಡಿತ್ತು. ನಗರದ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಮಾರ್ಚ್ ಆರಂಭಗೊಂಡಿತು. ನಗರಸಭಾ ಕಾರ್ಯಾಲಯದ ಗೇಟಿನ ಮುಂಭಾಗ ಮಾರ್ಚ್ ನಡೆಸಿದ ಕಾರ್ಯಕರ್ತರನ್ನು ಪೋಲೀಸರು ತಡೆದರು.

ಈ ವೇಳೆ ಪೋಲೀಸರೊಂದಿಗೆ ನೂಕು ನುಗ್ಗಾಟ ನಡೆಯಿತು. ಗೇಟು ಹಾರಿ ಕಾರ್ಯಕರ್ತರು ನಗರಸಭಾ ಕಾರ್ಯಾಲಯ ನುಗ್ಗುವುದನ್ನು ತಡೆದು ಚದುರಿಸಲು ಪೋಲೀಸರು ಜಲಫಿರಂಗಿ ಪ್ರಯೋಗಿಸಿದರು.

ಪ್ರತಿಭಟನಾ ಮಾರ್ಚ್ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಉದ್ಘಾಟಿಸಿದರು. ನಗರಸಭಾ ವಿಪಕ್ಷ ನಾಯಕ ಪಿ. ರಮೇಶ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಪಿ. ಆರ್. ಸುನಿಲ್, ನಗರಸಭಾ ಸದಸ್ಯ ವರಪ್ರಸಾದ ಕೋಟೆಕಣಿ, ಉಮಾ ಕಡಪ್ಪರ, ಸವಿತಾ ಟೀಚರ್, ಪ್ರಮೀಳಾಮಜಲ್
ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡರು

SHARE
Loading spinner

Leave a Reply

Your email address will not be published. Required fields are marked *

error: Content is protected !!