ಕಾ| ಲೋಕಯ್ಯ ಪೂಜಾರಿಯವರ 8 ನೇ ವಾರ್ಷಿಕ ಸಂಸ್ಮರಣೆ

ಉಪ್ಪಳ : ಕಾ| ಲೋಕಯ್ಯ ಪೂಜಾರಿ ಯವರ 8 ನೇ ವಾರ್ಷಿಕ ಸಂಸ್ಮರಣೆ ಬೇಕೂರು ಸುಭಾಷ್ ನಗರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕಯ್ಯ ಪೂಜಾರಿಯವರ ಸಹೋದರರಾದ ಕೃಷ್ಣಪ್ಪ ಪೂಜಾರಿ ವಹಿಸಿದರು.

ಕಾರ್ಯಕ್ರಮವನ್ನು ಸಿ.ಪಿ.ಐ (ಎಂ) ಲೋಕಲ್ ಕಮಿಟಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬೋಳ್ಳಾರು ಉದ್ಘಾಟಿಸಿ ಮಾತನಾಡಿದರು. ಏರಿಯಾ ಕಮಿಟಿ ಸದಸ್ಯರಾದ ಡಿ.ಕಮಲಾಕ್ಷ ಲೋಕಲ್ ಕಮಿಟಿ ಸದಸ್ಯರಾದ ಪ್ರವೀಣ್,ಪಾರ್ವತಿ,ಸಜಾನ್, ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಯು ಶೆಟ್ಟಿ ಹಾಗೂ ಹಿರಿಯ ಕಮಿನಿಷ್ಟ್ ನೇತಾರ ದಾಮೋದರ್ ಕಣ್ಣಟಿಪಾರೆ ,ಯುವಶಕ್ತಿ ಅಧ್ಯಕ್ಷರಾದ ಮನೋಜ್ ಕುಮಾರ್, ಗ್ರಂಥಾಲಯದ ಅಧ್ಯಕ್ಷ ರಾದ ಲಕ್ಷ್ಮಣ ಪೂಜಾರಿ ಬೋಳ್ಳಾರು ಮೊದಲಾದವರು ಉಪಸ್ಥಿತರಿದ್ದರು. ಸಿ. ಪಿ. ಐ.(ಎಂ) ಬೇಕೂರು ಬ್ರಾಂಚ್ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬೋಳ್ಳಾರು ಸ್ವಾಗತಿಸಿ ಖಾಲಿದ್ ಜೋಡುಕಲ್ಲು ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!