ಪರೀಕ್ಷಾ ಸ್ಪೂರ್ತಿ ಪೌಂಡೇಶನ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತಾ.03/08/2025 ಬೆಳಿಗ್ಗೆ 10ಕ್ಕೆ ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್.ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಪರೀಕ್ಷಾ ಸ್ಪೂರ್ತಿ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಗುರು ಶ್ರೇಷ್ಠ ಪ್ರಶಸ್ತಿ – 2025ಕ್ಕೆ ಪ್ರಾಶಾಂತಿ ವಿದ್ಯಾಕೇಂದ್ರ ಬಾಯಾರು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎನ್.ಕೆ.ಕುಲಾಲ್.ಬೇಕೂರು,ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆಗಸ್ಟ್.03ರಂದು ಮೈಸೂರಿನಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ. ಇವರು ಕಲಿಸಿದ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕ ಗಳಿಸಿದ್ದು. ಕನ್ನಡ ಸಾಹಿತ್ಯದಲ್ಲೂ ಸಾಧನೆ ಮಾಡಿದ್ದಾರೆ,ಉತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದರೆ. ನಿರೂಪಕರು ಗಾಯಕರು ಸಾಹಿತ್ಯ ಬರಹಗಾರರು ಆದ ಇವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದಾರೆ.