ಕುಂಬಳೆ : ಬಾಡೂರು ಪದವು ಶ್ರೀ ಕೃಷ್ಣ ಮಂದಿರದಲ್ಲಿ 39 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಅಗೋಸ್ಟ್ 15 ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ನಡೆಯಲಿದೆ.
ಜನ್ಮಾಷ್ಟಮಿಯ ಅಂಗವಾಗಿ ತಾರೀಕು 10-8-2025 ಆದಿತ್ಯವಾರ ಬೆಳಗ್ಗೆ 9ಗಂಟೆಗೆ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ12:30 ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ, ಹಾಗು 2ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ ಸಂಜೆ 4 ಗಂಟೆಗೆ ಸರಿಯಾಗಿ ಶ್ರೀ ಕೃಷ್ಣಾ ವೇಷಧಾರಿಗಳ ಶೋಭಾಯಾತ್ರೆ ಜರಗಲಿದೆ.
ವಿಶೇಷ ಆಕರ್ಷಣೆಗೆ AKS ತಾಂಬೂಲ ಬದಿಯಡ್ಕ,ರುದ್ರ ಉದುಮ ತಂಡದ ರಾಧಾ ಕೃಷ್ಣ ಕುಣಿತ,ತತ್ವಮಸಿ ಕುಣಿತ ಭಜನಾ ಮಂಡಳಿ ಶೇಣಿ ಇವರಿಂದ ಕುಣಿತ ಭಜನೆ ಜರಗಲಿದೆ,ರಾತ್ರಿ 8 ರಿಂದ ಚಂದ್ರೋದಯದ ವರೆಗೆ ಭಜನಾ ಕಾರ್ಯಕ್ರಮ ಜರಗಲಿದೆ.