ವಾಮಂಜೂರು : ಜಿ.ಎಲ್.ಪಿ.ಶಾಲೆ ವಾಮಂಜೂರಿನಲ್ಲಿ 79ನೇ ಸ್ವಾತಂತ್ರ್ಯೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸಿಲ್ವಿಯಾ ಟೀಚರ್ ಧ್ವಜಾರೋಹಣಗೈದರು.ವಾರ್ಡ್ ಮೆಂಬರ್ ಶ್ರೀಯುತ ಆದರ್ಶ ಬಿ.ಯಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿ.ಟಿ.ಎ.ಅಧ್ಯಕ್ಷರಾದ ಶ್ರೀಯುತ ಕಲಂದರ್ ತಾಜುದ್ದೀನ್ ಇವರ ಅಧ್ಯಕ್ಷತೆಯಲ್ಲಿ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯರಾದ ಶ್ರೀಯುತ ಅಬ್ದುಲ್ ಹಮೀದ್,ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾದ ಶ್ರೀಯುತ ಶೇಖ್ ಉಸ್ಮಾನ್, ಶಾಲಾ ಹಳೆ ವಿದ್ಯಾರ್ಥಿಗಳಾದ ಶ್ರೀಯುತ ಅಝೀಝ್, ಶ್ರೀಯುತ ಮೊಯಿದೀನ್, ಶ್ರೀಯುತ ಬಶೀರ್,ಶ್ರೀಯುತಹನೀಫ್,ಶ್ರೀಮತಿ ಫಾಮೀದ ಬಾನು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಕ್ಷಕರು, ವಿದ್ಯಾಭಿಮಾನಿ ಬಂಧುಗಳು ಉಪಸ್ಥಿತರಿದ್ದರು.
ನಮ್ಮ ಶಾಲಾ ಹಳೆ ವಿದ್ಯಾರ್ಥಿಯೂ ಯು.ಕೆ.ಜಿ.ತರಗತಿಯ ಮಹಾಪೋಷಕರು ಆದಂತಹ ಶ್ರೀಯುತ ಮುಜೀಬ್ ರಹಮಾನ್ ಇವರ ಮಗಳೂ, ಯು.ಕೆ. ಜಿ.ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಿದ ಕುಮಾರಿ ಮರಿಯಮ್ ಇವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಕಾರ್ಯಕ್ರಮಕ್ಕೆ ಸ್ವಾಗತ ಬಯಸಿ,ಶ್ರೀಮತಿ ಪ್ರಸೀದ ಟೀಚರ್ ವಂದಿಸಿ, ಶ್ರೀಮತಿ ಶೋಭಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ಮೂಡಿ ಬಂದಿತು. ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.