ಮಂಜೇಶ್ವರ : ವಿದ್ಯಾರ್ಥಿಗಳ ಗುಂಪೊಂದು 9ನೇ ತರಗತಿಯ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆಗೈದು ಗಂಭೀರ ಗಾಯಗೊಳಿಸಿದೆ.
ಉಪ್ಪಳ ಹೈಯರ್ ಸೆಕಂಡರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಕಡಂಬಾರ್ ಮೊರತ್ತಣೆ ನಿವಾಸಿ ಮೊಹಮ್ಮದ್ ನಿಶಾದ್ (14) ಗಂಭೀರ ಹಲ್ಲೆಗೊಳಗಾದ ವಿದ್ಯಾರ್ಥಿ.ಹಲ್ಲೆಯಿಂದ ತಲೆ, ಮೂಗು, ಕಣ್ಣು ಹಾಗೂ ಶರೀರದ ಇತರ ಭಾಗಗಳಿಗೆ ಗಂಭೀರ ಗಾಯಗೊಂಡ ನಿಶಾದ್ ನನ್ನು ಕಾಸರಗೋಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸೋಮವಾರ ಸಂಜೆ ಶಾಲೆ ಬಿಟ್ಟು ಹೊರಗೆ ಬರುತಿದ್ದಂತೆಯೇ ವಿದ್ಯಾರ್ಥಿಗಳ ತಂಡವೊಂದು ಆಕ್ರಮಿಸಿರುವುದಾಗಿ ದೂರಲಾಗಿದೆ.
ಈ ಶಾಲೆಯಲ್ಲಿ ಆಗಾಗ ಇಂತಹ ಘಟನೆಗಳು ಸಂಭವಿಸುತ್ತಿರುವುದಾಗಿ ಇಲ್ಲಿಯ ಸ್ಥಳೀಯರು ಹೇಳುತ್ತಿದ್ದಾರೆ.