ಕೇಂದ್ರದ ಮೋದಿ ಸರಕಾರ ಹಾಗೂ ಕೇರಳದ ಎಡರಂಗ ಸರಕಾರಗಳು ಜನತೆಗೆ ಕಿರುಕುಳ ನೀಡುವಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದು, ಜನರ ಪ್ರತಿಭಟನೆಯ ಹಾದಿ ತಪ್ಪಿಸಲು ಮಹಿಳೆಯರನ್ನು ಮುಂದಿಟ್ಟು ಅಪವಾದ ಪ್ರಚಾರದಲ್ಲಿ ನಿರತವಾಗಿದ್ದು, ಇವುಗಳ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ, ಅದರ ಭಾಗವಾಗಿ ಗೃಹಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನತೆಯ ಆಶೀರ್ವಾದ ಬಯಸುತ್ತಿದ್ದೇವೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ.
ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಶ್ರೀ ಅಶ್ರಫ್ ಮುಟ್ಟಂ ಅವರ ನಿವಾಸದಲ್ಲಿ ನಡೆದ ಮಂಡಲ ಮಟ್ಟದ ಕಾಂಗ್ರೆಸ್ ಗೃಹಸಂದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಬಾಬು ಬಂದ್ಯೋಡುರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನೇತಾರರಾದ ಫಾರೂಕ್ ಶಿರಿಯ, ರಾಜೇಶ್, ಗೀತಾ ಬಂದ್ಯೋಡು, ಮುಹಮ್ಮದ್ ಮಲಂದೂರ್,ತಾಹಿರಾ, ಜಾವಿದ್, ಸಿದ್ದಿಕ್, ಶಫೀಕ್, ಬಾಬು, ಸುಂದರ, ಮೂಸಾ,ಇಸ್ಮಾಯಿಲ್, ಮುಹಮ್ಮದ್ ಮೇರ್ಕಳ, ಯೂಸುಫ್ ಕುನ್ನಿಲ್, ಹನೀಫ್ ಪೆರಿಂಗಡಿ ಮುಂತಾದವರು ಉಪಸ್ಥಿತರಿದ್ದರು.
ಅಶ್ರಫ್ ಮುಟ್ಟಂ ಸ್ವಾಗತಿಸಿ, ಶ್ರೀ ಲಕ್ಷ್ಮಣ ವಂದಿಸಿದರು.