ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ 04-09-2025 ರಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಓಣಂ ಆಚರಣೆಯ ಮಹತ್ವದ ಮಾತಿನೊಂದಿಗೆ ಪ್ರಾರಂಭವಾಗಿ ಸೊಗಸಾದ ಓಣಂ ಪೂಕಳಂ ರಚಿಸಿ ಅಲಂಕಾರ ದ ವೇದಿಕೆಯಲ್ಲಿ ಈ ತಿಂಗಳ ಮಾಸಪತ್ರಿಕೆಯನ್ನು ಬಿಡುಗಡೆ ಗೊಳಿಸಿದ ಅತಿಥಿಗಳಾದ ಪೆಳತ್ತಡ್ಕ ಶ್ರೀ ರಾಮಕೃಷ್ಣ ಭಟ್ ,ವ್ಯವಸ್ಥಾಪಕರಾದ ಶ್ರೀ ಎಚ್ ಮಹಾಲಿಂಗ ಭಟ್ , ಟ್ರಸ್ಟ್ ಸದಸ್ಯರಾದ ಪಯ್ಯರಕೋಡಿ ಶ್ರೀ ಸದಾಶಿವ ಭಟ್ , ಶಾಲಾ ಪ್ರಾಂಶುಪಾಲರಾದ ಶ್ರೀ ವಾಮನನ್,ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಾಕ್ ಅವರುಗಳ ಉಪಸ್ಥಿತಿಯಲ್ಲಿ ಹಬ್ಬದ ಸಡಗರದ ವಿಶೇಷತೆಗಳೊಂದಿಗೆ ಶುಭಾಶಂಸನೆಗೈದರು. ಓಣಂ ಹಬ್ಬದ ಸೌಂದರ್ಯ ಹೆಚ್ಚಿಸಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳ ಸಾಂಪ್ರದಾಯಿಕ ನೃತ್ಯ, ತಿರುವಾದಿರ, ವಾಂಜಿಪಾ ಟ್,ಸಂಗೀತ ಹಾಗೂ ಮಹಾಬಲಿ ವಾಮನ ಅವತಾರದ ದೃಶ್ಯ ಪ್ರದರ್ಶನ ಮೂಲಕ ಓಣಂ ಹಬ್ಬದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವಂತಾಯಿತು.
ಕಾರ್ಯಕ್ರಮ ವನ್ನು ಕನ್ನಡ ಶಿಕ್ಷಕರಾದ ಶ್ರೀ ನಿತ್ಯಾನಂದ ಕೆ ಆರ್ ಬೇಕೂರು ನಿರೂಪಿಸಿ ವಂದನಾರ್ಪಣೆಗೈದರು. ಎಲ್ಲಾ ಶಿಕ್ಷಕ,ಶಿಕ್ಷಕೇತರ ಸಿಬ್ಬಂದಿಗಳು, ಸಾಯಿಬಂಧುಗಳು ಮತ್ತು ವಿದ್ಯಾರ್ಥಿಗಳು ಭಾಗವಸಿದ್ದರು.ಎಲ್ಲರಿಗೂ ಸಾಂಪ್ರದಾಯಿಕ ಓಣಂ ಸಧ್ಯ ವಿತರಣೆಯ ಮೂಲಕ ಸಂಪನ್ನಗೊಂಡಿತು.