ಕುಂಬಳೆ : ಮೊಗ್ರಾಲ್ ಪುತ್ತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸುವಾಗ ಕ್ರೈನ್ ನಿಂದ ಬಿದ್ದು ಗಾಯಗೊಂಡ ವ್ಯಕ್ತಿಯೂ ಮೃತಪಡುವುದರೊಂದಿಗೆ ಸಾವಿನ ಸಂಖ್ಯೆ ಎರಡಕ್ಕೇರಿದೆ.ಕೋಝಿಕ್ಕೋಡ್ ಬಳಿಯ ವಡಗರ ನಿವಾಸಿಗಳಾದ ಅಕ್ಷಯ್ (30), ಅಶ್ವಿನ್ (26)ಮೃತ ವ್ಯಕ್ತಿಗಳಾಗಿದ್ದಾರೆ.
ಗುರುವಾರ ಮಧ್ಯಾಹ್ನ 12ರ ವೇಳೆಗೆ ಹೆದ್ದಾರಿಗೆ ದೀಪ ಅಳವಡಿಸುವ ವೇಳೆ ಕ್ರೈನ್ ನ ಬಾಕ್ಸ್ ಕಳಚಿದಾಗ, ಕರ್ತವ್ಯದಲ್ಲಿದ್ದ ಇವರಿಬ್ಬರೂ ಬಿದ್ದಿದ್ದರು. ಈ ಪೈಕಿ ಅಕ್ಷಯ್ ಮೊದಲು ಮೃತಪಟ್ಟಿದ್ದರು.
ಕುಂಬಳೆ ಸಹಕಾರಿ ಆಸ್ಪತ್ರೆಗೆ ಕರೆತರುವ ವೇಳೆ ಅಕ್ಷಯ್ ನ ಮರಣ ಸಂಭವಿಸಿತು. ಅಶ್ವಿನ್ ಅವರನ್ನು ಮಂಗಳೂರಿಗೆ ಕೊಂಡೊಯ್ಯವಾಗ ದಾರಿ ಮಧ್ಯೆ ಸಾವು ಸಂಭವಿಸಿದೆ.
ಮಂಗಳವಾರ ರಾ. ಹೆದ್ದಾರಿಯ ಚೆರ್ಕಳಂ -ನಿಲೇಶ್ವರಂ ರೀಚಿನ ಚೆರ್ಕಳ ಮೇಲ್ಸೇತುವೆಯಿಂದ ಬಿದ್ದು ಅಸ್ಸಾಂ ನಿವಾಸಿ ಕಾರ್ಮಿಕ ರಾಖಿ ಬುಲ್ಹಕ್ (27)ಎಂಬಾತ ಮೃತಪಟ್ಟಿದ್ದರು.ಮೊಗ್ರಾಲ್ ಪುತ್ತೂರು ರಾ. ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ 12ರ ವೇಳೆ ಘಟನೆ ಸಂಭವಿಸಿತು.