ಕಾಸರಗೋಡು : ಬಂದಡ್ಕದಲ್ಲಿ 10ನೇ ತರಗತಿ ಶಾಲಾ ವಿದ್ಯಾರ್ಥಿನಿ ಮಲಗುವ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ನಡೆಸಿರುವ ಘಟನೆ ನಡೆದಿದೆ. ಕುಂಡಾಂಗುಳಿ ಸರಕಾರಿ ಹಯರ್ ಸೆಕಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದೇವಕಿ (16)ಆತ್ಮಹತ್ಯೆ ನಡೆಸಸಿದೆ. ಮಂಗಳವಾರ ಬೆಳಿಗ್ಗೆ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಈಕೆಯ ಮೃತದೇಹ ಪತ್ತೆಯಾಯಿತು.
ಮೃತ ವಿದ್ಯಾರ್ಥಿನಿ ಬಂದಡ್ಕ ಗ್ರಾಮೀಣ ಬೇಂಕಿನ ಬಳಿಯಲ್ಲಿ ಗಂಜಿ ಕ್ಯಾಂಟೀನ್ ನಡೆಸುವ ಮಹಿಳೆ ಸಾವಿತ್ರಿ ಎಂಬವರ ಮಗಳಾಗಿದ್ದು, ಆತ್ಮಹತ್ಯೇಗೆ ಕಾರಣ ಏನೆಂದು ತಿಳಿದು ಬಂದಿಲ್ಲ.
ಬಾಲಸಂಘದ ಬಂದಡ್ಕ ವಿಲೇಜ್ ಘಟಕ ಅಧ್ಯಕ್ಷೆಯಾಗಿದ್ದು ಕ್ರಿಯಾಶೀಲ ಹುಡುಗಿ ಎನಿಸಿದ್ದಳು. ಬೇಡಗಂ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.