ಕನ್ನಡ ಭವನ ಕಾಸರಗೋಡು ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಸಾರತ್ಯದ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025. ವೇದಿಕೆಯಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ರೂವಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಸುದೀರ್ಘ ಕಲಾವದಿಯ ಅಧ್ಯಕ್ಷ ರಾಗಿದ್ದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರ ಜೀವಮಾನದ ಸರ್ವತೋಮುಖ ಕನ್ನಡ ಸೇವೆ, ಧಾರ್ಮಿಕ ಸೇವೆ, ಸಾಮಾಜಿಕ ಸೇವೆಯನ್ನು, ಸಾಧನೆಯನ್ನು ಪರಿಗಣಿಸಿ “ಕಾಸರಗೋಡು ದಸರಾ ಸಾಧಕ ಪ್ರಶಸ್ತಿ 2025.ನೀಡಿ ಗೌರವಿಸಲಾಯಿತು.
ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ -ಸಾಂಸ್ಕೃತಿಕ ಘಟಕ ಅಧ್ಯಕ್ಷ ಹಾಗೂ ಕ್ಷೇತ್ರ ಪಾತ್ರಿಗಳಾದ ಪಾಂಗೋಡು ಪ್ರವೀಣ್ ನಾಯಕ ಪ್ರಶಸ್ತಿ ನೀಡಿ ಗೌರವಿಸಿದರು. ಕಾಸರಗೋಡು ದಸರಾ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅಭಿನಂದನಾ ಭಾಷಣ ಮಾಡಿದರು. ಕನ್ನಡ ಭವನ ಪ್ರಕಾಶನದ, ಪ್ರಕಾಶಕಿ ಸಂದ್ಯಾ ರಾಣಿ ಟೀಚರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಚಂದ್ರಶೇಖರ ಮಯ್ಯ, ಸುಕೇಶ್ ಮಂಗಳೂರು, ನಾಗೇಶ್ ಮಂಗಳೂರು ಮತ್ತಿತರರಿದ್ದರು. ಪಾಂಗೋಡು ಕ್ಷೇತ್ರ ನಿರ್ವಹಣಾಧಿಕಾರಿ ಶ್ರೀ ನವೀನ್ ನಾಯಕ ನಾಗರಕಟ್ಟೆ ನಿರ್ವಹಿಸಿದರು.