ಪಾಕ್ ಜತೆ ಸಂಘರ್ಷ : ಕಾಸರಗೋಡಿನಲ್ಲಿ ಕಟ್ಟೆಚ್ಚರ, ಸೀತಾಂಗೋಳಿ ಎಚ್.ಎ.ಎಎಲ್ ಸಹಿತ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಬಿಗಿ ಭದ್ರತೆ, ಕಂಟ್ರೋಲ್ ರೂಂ ಕಾರ್ಯಾರಂಭ

ಜಿಲ್ಲೆಯಲ್ಲಿರುವ
ಸೀತಾಂಗೋಳಿಯ ಎಚ್.ಎ.ಎಲ್. ಕಾರ್ಖಾನೆ, ಪೆರಿಯ ದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ ಸಿಪಿಸಿಆರ್ ಐ ಗೆ ಕೇಂದ್ರ ನಿರ್ದೇಶನದಂತೆ ಭದ್ರತಾ ಕಾವಲು ಏರ್ಪಡಿಸಲಾಗಿದೆ

ಅಲ್ಲದೇ ವಿದೇಶಿಯರು ಸಹಿತ ಪ್ರವಾಸ ಬಂದು ವಾಸಿಸುವ ಟೂರಿಸ್ಟ್ ಹೋಟೆಲ್ ಮತ್ತು ಕೇಂದ್ರ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಭದ್ರತೆ ಒದಗಿಸಲಾಗಿದೆ.
ಅಲ್ಲದೇ ರೈಲ್ವೇ ನಿಲ್ದಾಣ, ರೈಲ್ವೇಹಳಿ, ಕರಾವಳಿ ತೀರಪ್ರದೇಶದ ಮೇಲೆ ವಿಶೇಷ ಕಣ್ಣಾವಲು ಇರಿಸಲಾಗಿದೆ.

ಮುನ್ನೆಚ್ಚರಿಕೆಯಂಗವಾಗಿ ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಗೃಹಖಾತೆ ಕಾರ್ಯದರ್ಶಿಗೆ ಇದರ ಹೊಣೆ ವಹಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!