ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಶಿವರಾಮ ಕಾಸರಗೋಡು 60ನೇ ಜನ್ಮದಿನೋತ್ಸವ ಪೋಸ್ಟರನ್ನು (ಭಿತ್ತಿ ಪತ್ರ) ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರಿಂದ ಬಿಡುಗಡೆ

ಕೇರಳ -ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮೋತ್ಸವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ( ರಿ ) ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ಬೆಳಿಗ್ಗೆ ಗಂಟೆ 11.00 ರಿಂದ ರಾತ್ರಿ 9.00 ರವರೆಗೆ ಹಮ್ಮಿಕೊಳ್ಳಲಾಗಿದೆ. ಇದರ ಪೋಸ್ಟರ್ ರನ್ನು (ಭಿತ್ತಿ ಪತ್ರ) ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯರ್ ಸೇವಾ ಸಂಘದ ಗೌರವಾಧ್ಯಕ್ಷ ಕೆ. ನಿರಂಜನ ಕೊರಕೋಡು , ಅಧ್ಯಕ್ಷ ಪ್ರದೀಪ್ ಬೇಕಲ್ ,ಉಪಾಧ್ಯಕ್ಷ ಕೆ. ಜಗದೀಶ ಕೂಡ್ಲು, ಅಮ್ಮ ಈವೆಂಟ್ ಮ್ಯಾನೇಜ್ ಮೆಂಟ್ ಮಾಲಕ ಕುಶಲಕುಮಾರ್ ಕೆ ಕನ್ನಡ ಗ್ರಾಮ, ಪತ್ರಿಕಾ ಛಾಯಾಗ್ರಾಹಕ, ಸಂಘಟಕ ಶ್ರೀಕಾಂತ್ ಕಾಸರಗೋಡು, ದಾಸ ಸಂಕೀರ್ತನಾ ಗುರು ಜಯನಂದಕುಮಾರ್ ಹೊಸದುರ್ಗ ಕಾಸರಗೋಡು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವದಂದು ಬೆಳಗ್ಗೆ ಗಂಟೆ 11.00 ಕೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ರಾಷ್ಟ್ರ ಧ್ವಜಾರೋಹಣ. ಮಧ್ಯಾಹ್ನ 1.00ಕೆ ಕನ್ನಡ ಗ್ರಾಮದಲ್ಲಿ ತಾಯಿ ಭುವನೇಶ್ವರಿಯ ಛಾಯ ಚಿತ್ರಕ್ಕೆ ದೀಪ ಬೆಳಗಿಸಿ ಉದ್ಘಾಟನೆ. ರಾಜ್ಯಮಟ್ಟದ ಕವಿಗೋಷ್ಠಿ , ವಿಶೇಷೋಪನ್ಯಾಸ ಉದ್ಘಾಟನೆ 1.15 ಕೆ ಶಿವರಾಮ ಕಾಸರಗೋಡು 60 ಫೋಟೋ ಗ್ಯಾಲರಿ ಉದ್ಘಾಟನೆ, 1.30ಕೆ ಖ್ಯಾತ ಗಾಯಕ,ಗಾಯಕಿಯರಿಂದ ಕನ್ನಡ ಗೀತಾ ಗಾಯನ 2.00 ರಿಂದ ಕರ್ನಾಟಕ ಏಕೀಕರಣ ಕಾಸರಗೋಡು ವಿಲೀನೀಕರಣಕ್ಕಾಗಿ ಬಹುಕಾಲದಿಂದ ಕನ್ನಡ, ಕನ್ನಡಿಗರ ಹೋರಾಟಗಳಿಗೆ, ಗಡಿನಾಡು ಕಾಸರಗೋಡಿನಲ್ಲಿ ಮಹಾಜನ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ನಿರಂತರವಾಗಿ ದುಡಿದು ಸೇವೆ ಸಲ್ಲಿಸಿ ಕೀರ್ತಿ ಶೇಷರಾದ 60 ಮಂದಿ ಕನ್ನಡ ಸತ್ಯಾಗ್ರಹಿಗಳು, ಕನ್ನಡ ಕಟ್ಟಾಳುಗಳು, ಕನ್ನಡ ಹೋರಾಟಗಾರರು, ಕನ್ನಡ ಸಂಘಟನೆಗಳ ಮುಖಂಡರ ಭಾವಚಿತ್ರಕ್ಕೆ ಪುಷ್ಪ ನಮನ- ನುಡಿ ನಮನ ಸಲ್ಲಿಸಲಾಗುವುದು. 2.30 ಕೆ ಕಾಸರಗೋಡು ಕನ್ನಡಿಗ – ಗಡಿನಾಡು ಹೊರನಾಡು ಕನ್ನಡಿಗ – ಕರ್ನಾಟಕ ಸರಕಾರ – ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. 3.00ಕೆ ಖ್ಯಾತ ಗಾಯಕರಿಂದ ಸುಗಮ ಸಂಗೀತ ಗಾಯನ. ಸಂಜೆ ಗಂಟೆ 4.00ಕೆ ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮದಿನೋತ್ಸವ ಅಭಿನಂದನಾ ಸಮಾರಂಭ ಅಭಿನಂದನಾ ಕೃತಿ ಬಿಡುಗಡೆ, ಶಿವರಾಮ ಕಾಸರಗೋಡು ಸಾಕ್ಷ ಚಿತ್ರ ಲೋಕಾರ್ಪಣೆ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಜ್ಯೋತಿ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರಕಾರದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ, ಕೇರಳದ ಸಚಿವರು ಶಾಸಕರು, ಲೋಕಸಭಾ ಸದಸ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.4.30ಕೆ ಕಾಸರಗೋಡು ಗೋಶಾಲೆಯ ಭೂಮಿ ಪೂಜೆ ಹಾಗೂ ಕೇರಳ-ಕರ್ನಾಟಕ ಭವನದ ಶಿಲಾನ್ಯಾಸ ನಡೆಯಲಿದೆ. ಸಂಜೆ 5.00ಕೆ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ಸಾಂಸ್ಕೃತಿಕ ರಾಯ ಭಾರಿಗಳು ಹಾಗೂ ವಿವಿಧ ಕ್ಷೇತ್ರದ ಕನ್ನಡದ ಸಾಧಕರಿಗೆ ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕಾಸರಗೋಡು ಕನ್ನಡ ಗ್ರಾಮೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. 6.00 ರಿಂದ 9.00 ತನಕ ಕೇರಳ – ಕರ್ನಾಟಕ ರಾಜ್ಯದ ವಿವಿಧ ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!