ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಕಾಸರಗೋಡು , ಸೀತಾಂಗೋಳಿ ಕಾರ್ಯ ಕ್ಷೇತ್ರದಲ್ಲಿ ನೂತನವಾಗಿ ಪ್ರಾರಂಬಿಸಿದ ” ಕಲ್ಪ ವೃಕ್ಷ ” ಜ್ಞಾನವಿಕಾಸ ಕೇಂದ್ರ ಸೀತಾಂಗೋಳಿ ಇದರ ಮೊದಲ ಸಭೆಯು ಜ್ಞಾನಿಕಾಸ ಸಮನ್ವಯಧಿಕಾರಿ ಶ್ರೀಮತಿ ಸೌಮ್ಯ ಅವರ ಮಾರ್ಗದರ್ಶನದಲ್ಲಿ ವೀರ ಹನುಮನ್ ಕ್ಲಬ್ ಮುಕಾರಿಕಂಡದಲ್ಲಿ ನಿನ್ನೆ ನಡೆಯಿತ್ತು.
ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿ , ಜ್ಞಾನಿಕಾಸ ಕೇಂದ್ರದ ಸಭೆ ಹಾಗೂ ನಿರ್ವಣೆ ಬಗ್ಗೆ ತುಂಬಾ ಪ್ರಯೋಜನಕಾರಿಯಾಗಿದೆ ಎoದು ಎಲ್ಲಾರಿಗೂ ಮನತಟ್ಟುವಂತೆ ಉತ್ತಮವಾದ ಮಾಹಿತಿ ನೀಡಿದರು . ಈ ಸಂದರ್ಭದಲ್ಲಿ ಸೀತಾಂಗೋಳಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಕೇಶಿನಿ ಅಧ್ಯಕ್ಷ ಸ್ಥಾನ ವಹಿಸಿದರು , ಮುಖ್ಯ ಅತಿಥಿಯಾಗಿ ಶ್ರೀ ಮುರಳಿಕೃಷ್ಣ ಭಟ್ ಭಾಗವಹಿಸಿದರು.
ಸಮನ್ವಯಾಧಿಕಾರಿ ಶ್ರೀಮತಿ ಸೌಮ್ಯ , ಸೀತಾಂಗೋಳಿ ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಸರಿತ , ಶೌರ್ಯ ವಿಪತ್ತು ನಿರ್ವಾಹಣ ಮಧೂರು ಘಟಕದ ಸ್ವಯಂ ಸೇವಕರಾದ ಪ್ರದೀಪ್ ಸೀತಾಂಗೋಳಿ , ಸಂಘದ ಸದಾಸ್ಯರು ಉಪ್ಪಸ್ಥಿತರಿದ್ದರು . ಗಂಗೋತ್ರಿ ಸ್ವ-ಸಹಾಯ ಸಂಘ ಮುಕಾರಿಕಂಡ ಜಬ್ದಾರಿ ವಹಿಸಿಗೊಂಡರು . ಈ ಸಭೆಗೆ ಸಮನ್ವಯಾಧಿಕಾರಿ ಶ್ರೀಮತಿ ಸೌಮ್ಯ ನಿರೂಪಿಸಿ , ಗಂಗೋತ್ರಿ ಸಂಘದ ಸದಾಸ್ಯರದ ಶ್ರೀಮತಿ ಅಶ್ವಿನಿ ಸ್ವಾಗತಿಸಿ , ಗಂಗೋತ್ರಿ ಸಂಘದ ಸದಾಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ವಂದಿಸಿದರು .