ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯ ಭಾಗವಾಗಿ 2020–21 ಆರ್ಥಿಕ ವರ್ಷದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಮೀಂಜ ಕೃಷಿ ಭವನದ ಉದ್ಘಾಟನೆ

ಮಂಜೇಶ್ವರ: ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯ ಭಾಗವಾಗಿ 2020–21 ಆರ್ಥಿಕ ವರ್ಷದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಮೀಂಜ ಕೃಷಿ ಭವನವನ್ನು ಗೌರವಾನ್ವಿತ ಕೃಷಿ ಸಚಿವರಾದ ಶ್ರೀ ಪಿ. ಪ್ರಸಾದ್ ಅವರು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಮಂಜೇಶ್ವರ ಶಾಸಕ ಶ್ರೀ ಎ. ಕೆ. ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.

“ರೈತರ ದ್ವಿತೀಯ ಮನೆಯಾಗಿರುವುದು ಕೃಷಿ ಭವನ. ರೈತರಿಗೆ ಉತ್ತಮ ಸೇವೆಗಳು ನೀಡುವ ಉದ್ದೇಶದಿಂದ ಈ ಕೃಷಿ ಭವನದಲ್ಲಿ ಪ್ಲಾಂಟ್ ಹೆಲ್ತ್ ಕ್ಲಿನಿಕ್ (ಸಸ್ಯ ಆರೋಗ್ಯ ಕೇಂದ್ರ) ಕೂಡ ಸ್ಥಾಪಿಸಲಾಗುತ್ತದೆ. ಎಂದು ಸಚಿವರು ಹೇಳಿದರು.

ಸಮಾರಂಭದಲ್ಲಿ ಸಂಸದ ಶ್ರೀ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಪ್ರಭಾಷಣ ಮಾಡಿದರು. ಆತ್ಮ ಕಾಸರಗೋಡು ಆಯೋಜಿಸಿದ್ದ ಕಿಸಾನ್ ಗೋಷ್ಠಿಯನ್ನು ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು.

ಬ್ಲಾಕ್ ಸ್ಟ್ಯಾಂಡಿಂಗ್ ಸಮಿತಿ ಅಧ್ಯಕ್ಷ ಹಮೀದ್, ಬ್ಲಾಕ್ ಪಂಚಾಯತ್ ಸದಸ್ಯ ಕೆ. ವಿ. ರಾಧಾಕೃಷ್ಣ, ಗ್ರಾಮ ಪಂಚಾಯತ್ ಕಲ್ಯಾಣ ಸಮಿತಿ ಅಧ್ಯಕ್ಷ ಬಾಬು ಸಿ. ಕುಳ್ಳೂರು, ಸ್ಟ್ಯಾಂಡಿಂಗ್ ಸಮಿತಿ ಅಧ್ಯಕ್ಷೆ ರುಕಿಯ ಸಿದ್ದಿಕ್, ಆರೋಗ್ಯ–ಶಿಕ್ಷಣ ಸ್ಟ್ಯಾಂಡಿಂಗ್ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ, ಇತರ ವಾರ್ಡ್ ಸದಸ್ಯರು ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಶ್ರೀ ರಾಘವೆಂದ್ರ ಪಿ. ಅವರು ಸ್ವಾಗತ ಭಾಷಣ ಮಾಡಿದರು. ಮೀಂಜ ಕೃಷಿ ಅಧಿಕಾರಿ ಶ್ರೀಮತಿ ಚಂಚಲಾ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದ ಅಂಗವಾಗಿ ಮಂಜೇಶ್ವರ ಬ್ಲಾಕ್‌ನ ವಿವಿಧ ರೈತ ಸಮಿತಿಗಳ ಹಾಗೂ ‘ಕೆರಳ ಪ್ರೊಡಕ್ಟ್’ ಉತ್ಪನ್ನಗಳ ಪ್ರದರ್ಶನವನ್ನು ಸಹ ಆಯೋಜಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!