ಮಂಜೇಶ್ವರ: ಪಾವೂರು ಅಂಗನವಾಡಿ ಇಂದು ನಡೆದ ಪ್ರವೇಶ ಉತ್ಸವದಲ್ಲಿ ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯ ಕಮರುಂನ್ನಿಸ ಮುಸ್ತಾಫಾ ಅವರನ್ನು ಪಾವೂರು ಅಂಗನವಾಡಿ ವೆಲ್ಫೇರ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಪ್ರವೇಶ ಉತ್ಸವ ಮಕ್ಕಳಿಗೆ ಹೊಸ ಹುರುಪು ಹಾಗೂ ಸಂತೋಷ ತಂದಿದೆ ಇದೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ತಿಂಗಳಿಗೆ 1ಸಾವಿರ ಅನುದಾನ ಹೆಚ್ಚಿಸಿರುದರಿಂದ ಅವರಿಗೂ ಸಂತೋಷ ಆಗಿದೆ ಏಂದು ಗಣೇಶ್ ಪಾವೂರು ಹೇಳಿದರು ಈ ಸಂದರ್ಭದಲ್ಲಿ ಮುಸ್ತಾಫಾ ಕೊಡಿ.ಪುನೀತ್ ರೈ ಪಾವೂರು. ಅಂಗನವಾಡಿ ಕಾರ್ಯಕರ್ತೆ ಸೈಲಜಾ.ಸುಚಿತ್ರ. ಕೈರುಂನ್ನಿಸ ಪಾವೂರು. ವೆಲ್ಫೇರ್ ಕಮಿಟಿ ಸದಸ್ಯರು ಪುಟಾಣಿ ಮಕ್ಕಳು ಹಾಗೂ ಇನ್ನು ಹಲವು ಜನರು ಭಾಗವಹಿಸಿದರು ಸೈಲಜಾ ಸ್ವಾಗತಿಸಿ ಸುಚಿತ್ರ ವಂದಿಸಿದರು.