ಉಪ್ಪಳ ವಿದ್ಯುತ್ ಸೆಕ್ಷನ್ ಸಬ್ ಇಂಜಿನಿಯರ್ ಸೆಬಾಸ್ಟಿನ್ ರವರಿಗೆ ಉಪ್ಪಳ ವ್ಯಾಪಾರ ಭವನದಲ್ಲಿ ಬೀಳ್ಳೊಡುಗೆ ಸಮಾರಂಭ

ಮಂಜೇಶ್ವರ : ಸುದೀರ್ಘ ಕಾಲ ಸೇವೆಯನ್ನು ನೀಡಿ ನಿವೃತರಾದ ಉಪ್ಪಳ ವಿದ್ಯುತ್ ಸೆಕ್ಷನ್ ಸಬ್ ಇಂಜಿನಿಯರ್ ಸೆಬಾಸ್ಟಿನ್ ರವರಿಗೆ ಉಪ್ಪಳ ವ್ಯಾಪಾರ ಭವಣದಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಳೊಡುಗೆ ನೀಡಲಾಯಿತು.
ಕಳೆದ 29 ವರ್ಷಗಳಲ್ಲಿ ಇವರು ಕಾಸರಗೋಡು ನೆಲಿಕುನ್ನು, ಪೈವಳಿಕೆ, ಉಪ್ಪಳ ಸೇರಿದಂತೆ ವಿವಿಧ ಸೆಕ್ಷನ್ ಗಳಲ್ಲಿ ಸೇವೆಯನ್ನು ಜನರ ಪ್ರೀತಿಗೆ ಪಾತ್ರರಾಗಿದ್ದರು.

ಉಪ್ಪಳ ಸಬ್ ಅಸಿಸ್ಟಂಟ್ ಇಂಜಿನಿಯರ್ ಜಯನ್ ರವರ ಅಧ್ಯಕ್ಷತೆಯಲ್ಲಿ ನಡೆದ ವಿದಾಯ ಕೂಟ ಸಮಾರಂಭವನ್ನು ನಕಾಸರಗೋಡು ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಜ ಭಟ್ ಉದ್ಘಾಟಿಸಿದರು.

ಈ ಸಂದರ್ಭ ವಿದ್ಯುತ್ ಇಲಾಖೆ ಅಧಿಕಾರಿಗಳಾದ ನಂದ ಗೋಪಾಲ್, ರೋಹಿತ್, ಅನೀಶ್, ಸುಧೀರ್, ಶಾಜಿ, ಮಿಥುನ್, ಪ್ರಶಾಂತ್ ಮೊದಲಾದವರು ಶುಭ ಹಾರೈಸಿ ಮಾತನಾಡಿದರು.

ನಿವೃತರಾದ ಸೆಬಾಸ್ಟಿಯನ್ ರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!