ಮತದಾರರ ಪಟ್ಟಿ ಪರಿಷ್ಕರಣೆಯ ಎಲ್ಲಾ ಸೂಚನೆ ,ನಿರ್ಧೇಶಗಳನ್ನು ಕನ್ನಡದಲ್ಲೂ ಒದಗಿಸಿ : ಸಿಪಿಐ(ಎಂ) ಆಗ್ರಹ

ಮಂಜೇಶ್ವರ :ಕೇಂದ್ರ ಚುನಾವಣಾ ಕಮಿಷನ್ ಪ್ರಕ್ಯಾಪಿಸಿದ ಸ್ಪೆಷಲ್ ತೀವ್ರ ಪರಿಷ್ಕರಣೆ ಭಾಗವಾಗಿ ಕೇರಳದಲ್ಲಿ ನವಂಬರ್ 2 ರಿಂದ ಡಿಸೆಂಬರ್ 4 ರ ವರೆಗೆ ಮತದಾರರ ಪಟ್ಟಿಯ ತೀವ್ರ ಪರಿಶೋಧನೆ ನಡೆಸಲಿದ್ದಾರೆ.ಇದರ ಭಾಗವಾಗಿ ವಿವಿಧ ತಲದಲ್ಲಿ ಉದ್ಯೋಗಸ್ತರ ರಾಜಕೀಯ ಮುಖಾಂತರ ಸಭೆ ನಡೆದಿರುತ್ತದೆ.ಆದರೆ ಚುನಾವಣಾ ಅಧಿಕಾರಿಗಳು 2002 ರ ಮತದಾರ ಪಟ್ಟಿಯ ಆದಾರದಲ್ಲಿ ಈ ತೀವ್ರ ಪರಿಷ್ಕರಣೆ ನಡೆಸುವಾಗ ಕೇರಳದ ಗಡಿ ಭಾಗದಲ್ಲಿರುವ ಮಂಜೇಶ್ವರ ಮಂಡಲದಲ್ಲಿ ದೊಡ್ಡ ಸಮಸ್ಯೆ ತಲೆದೂರಿದೆ.ಮತದಾರರ 2002 ರ ಪಟ್ಟಿ ಮಲಯಾಳಂ ಭಾಷೆಯಲ್ಲಿದೆ.ಮತದಾರರಿಗೆ ನೀಡುವ ಎನ್ಯುಮರೇಷನ್ ಫಾರಂ ಭರ್ತಿ ಮಾಡಲು ಈ ಪ್ರದೇಶದಲ್ಲಿರುವ ಕನ್ನಡ ಕಲಿತವರಿಗೆ ಸಾಧ್ಯವಲ್ಲ. ಮಲಯಾಳಂ ಅಲ್ಲದೆ ಇಂಗ್ಲೀಷ್ ,ಕನ್ನಡ ಭಾಷೆಗಳಲ್ಲಿ ಫಾರಂ ಕೊಡದೆ ಇರುವುದು ಕೇಂದ್ರ ಚುನಾವಣಾ ಕಮಿಷನ್ ಭಾಷಾ ಅಲ್ಪಸಂಖ್ಯಾತರ ಮೇಲೆ ನಡೆಸಿದೆ ದ್ರೋಹವಾಗಿದೆ.

ಕೇಂದ್ರ ಆಡಳಿತ ಪಕ್ಷದ ನಾಯಕರಿಗೆ ಇದರ ಬಗ್ಗೆ ಯಾವುದೇ ಚರ್ಚೆ ಇಲ್ಲ. ಇದು ಇಲ್ಲಿನ ಕನ್ನಡಿಗರಿಗೆ ಚುನಾವಣಾ ಕಮಿಷನ್ ಹಾಗೂ ಕೇಂದ್ರ ಸರಕಾರ ಮಾಡುವ ದ್ರೋಹವಾಗಿದೆ.ಇದರ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಯಾದ ಜಿಲ್ಲಾ ಕಲೆಕ್ಟರ್ ಹಾಗೂ ರಾಜ್ಯ ಚುನಾವಣಾ ಕಮಿಷನ್ಗೆ ಸಿಪಿಐ(ಎಂ) ಮಂಜೇಶ್ವರ ಏರಿಯಾ ಸಮಿತಿಯು ಮನವಿ ನೀಡಿದ್ದು. ಕನ್ನಡಿಗರಿಗೆ ಕನ್ನಡದಲ್ಲಿ ಫಾರಂ ನೀಡಬೇಕು ಮತ್ತು 2002 ರ ಮತದಾರರ ಪಟ್ಟಿಯ ವೆಬ್ ಸೈಟ್ ನಲ್ಲಿ ಕನ್ನಡದಲ್ಲಿ ಮತದಾರರ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!