ಮಂಜೇಶ್ವರ: ಕುಲಾಲ ವೇದಿಕೆ ಮಂಜೇಶ್ವರ ಹೊಸಬೆಟ್ಟು ಮಂಜೇಶ್ವರ ಇದರ ವತಿಯಿಂದ ಕುಲಾಲ ವೇದಿಕೆಯ ಹಿರಿಯ ಮಾರ್ಗದರ್ಶಕರಾಗಿದ್ದ ದಿ. ಜಯಂತಮಾಸ್ಟರ್ ಮೀಯಪದವು ಹಾಗೂ ದಿ.ಸೋಮಶೇಖರ ಬಡಾಜೆ ಇವರ ಸ್ಮರಣಾರ್ಥದಲ್ಲಿ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಹಾಗು ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ , ಹೃದಯ ತಪಾಸಣಾ ಶಿಬಿರ ಬಿಪಿ , ಶುಗರ್ ಹೃದಯ ತಪಾಸಣೆ, ಇಸಿಜಿ , ಸಾಮಾನ್ಯ ಔಷದಿಯ ವಿಭಾಗ ಅರೋಗ್ಯ ಕಾರ್ಡ್ ಹಾಗು ಬಡ ರೋಗಿಗಳ ಅಗತ್ಯತೆಗಾಗಿ ಬೃಹತ್ ರಕ್ತದಾನ ಶಿಬಿರವು ತಾ. ೦೯.11 .2025 ನೇ ಆದಿತ್ಯವಾರದಂದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಮಂಜೇಶ್ವರದಲ್ಲಿ ಜರುಗಿತು.
ಶ್ರೀ ರಾಮಚಂದ್ರ ಮಾಸ್ತರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮಕ್ಕೆ ಶನೈಶ್ಚರ ಮಂದಿರದ ಧರ್ಮದರ್ಶಿಗಳಾದ ಶ್ರೀ ಕೃಷ್ಣ ಭಟ್ ವರು ಹಾಗು ಉದ್ಯಾವರ ಮಾಡದ ತಮ್ಮ ದೈವದ ಪಾತ್ರಿಯಾದ ಶ್ರೀ ತಿಮಿರಿ ಬೆಲ್ಚಡರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.
ಮಂಜೇಶ್ವವಾರ ಗ್ರಾಮ ಪಂಚಾಯತ್ ನ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಚೇಯರ್ ಮ್ಯಾನ್ ಶ್ರೀ ಯಾದವ ಬಡಾಜೆ, ಮಂಗಳೂರು ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ನ ಅಧ್ಯಕ್ಷರಾದ ಶ್ರೀ ಲಯನ್ ಸಂಜೀವ ಗೌಡ ಕತ್ಲಡ್ಕ , ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ತುಳಸೀದಾಸ್ ಮಂಜೇಶ್ವರ , ಶ್ರೀ ಶಾಸ್ತ ಕೃಪಾ ಜೈ ವೀರ ಹನುಮಾನ್ ವ್ಯಾಯಾಮ ಶಾಲೆ ಮಂಜೇಶ್ವರದ ಅಧ್ಯಕ್ಷರಾದ ಶ್ರೀ ಕವಿರಾಜ್ ಉದ್ಯಾವರ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದ ವೇದಿಕೆಯಲ್ಲಿ ಜೀವನ ಶ್ರೇಷ್ಠ 88 ಬಾರಿ ರಕ್ತದಾನ ಮಾಡಿದ ಮಹಾದಾನಿ ಸಂತೋಷ್ ಕುಮಾರ್ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು.