ಮಂಜೇಶ್ವರ: ಶ್ರೀ ವಿಧ್ಯಾ ವಿಠ್ಠಲ ದೇವರ ” ಗುಡ್ಡೆಮಠ ” ಬಂಗ್ರ ಮಂಜೇಶ್ವರಕ್ಕೆ ಚಿತ್ತೈಯಿಸಿದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ” ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನ ರಾಜರಾಜೇಶ್ವರಿ ನಗರ, ಬೆಂಗಳೂರು ಸುಮಾರು 390 ವರ್ಷ್ ಇತಿಹಾಸವಿರುವ ಶ್ರೀ ವಿಧ್ಯಾ ವಿಠ್ಠಲ ದೇವರ ” ಗುಡ್ಡೆಮಠ ” ಬಂಗ್ರ ಮಂಜೇಶ್ವರ, ದೇವಾಲಯಕ್ಕೆ ಬೆಂಗಳೂರು ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಸ್ವಾಮೀಜಿಗಳಾದ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಸ್ವಾಮೀಜಿಯವರು ಇತ್ತೀಚಿಗೆ ಭೇಟಿನೀಡಿದ್ದಾರೆ.
ಸೆಪ್ಟೆಂಬರ್ 2001 ಇಸವಿಯಲ್ಲಿ ಶ್ರೀ ಪರಶಕ್ತಿ ಕ್ಷೇತ್ರ ಮರಕಡ, ಮಾಡ್ಯಾರು ಶ್ರೀ. ಶ್ರೀ. ಶ್ರೀ. ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿ
ಯವರು , ಆಗಮಿಸಿ ದೇಗು ದ ಬಾಧಾ ನಿವಾರಣೆ ಗೈದು, ಪರಿಸರ ದ ನಾಶ ಗೊಂಡಿರುವ ದೇಗುಲಗಳ ಪುನರ್ ನಿರ್ಮಾಣ ಕ್ಕೆ ಅನುಗ್ರಹಿಸಿದರು
ನವೆಂಬರ್ 2001 ರಲ್ಲಿ, ಗುಡ್ಡೆಮಠ ದ ಸಂಪ್ರದಾಯಿಕ ಶ್ರೀ ಸಂಸ್ಥಾನ ಚಿತ್ರಪುರ ಮಠ ದ ” ಶ್ರೀ. ಶ್ರೀ. ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಯವರು ಪಾದರ್ಪಣೆ ಗೈದು, ಅನುಗ್ರಸಿರುವರು.
ಡಿಸೆಂಬರ್ 2013 ರಲ್ಲಿ ಶ್ರೀ ಶ್ರೀ K. S. ನಿತ್ಯಾನಂದ ಸ್ವಾಮೀಜಿ ಶ್ರೀ ರಾಮ ಮಠ, ಚಿಕ್ಕಮಗಳೂರು ರವರು ಆಗಮಿಸಿ ಮಠ ತಪೋವನ ಪುರಾಣ ಸಂಬಂಧ ಚಾಲನೆ ಯನ್ನು ಕೊಟ್ಟಿರುವರು.
ಇದೀಗ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಸ್ವಾಮೀಜಿಯವರು ಆಗಮಿಸಿ ತಲೆಮಾರು, ತಲೆಮಾರಾಗಿ ಬಂದಿರುವ ಧರ್ಮ ವನ್ನು, ಪೂಜಾ ಪಧತಿ ಗಳನ್ನು ಕಾಪಾಡಿ ಕೊಂಡು ಹೋಗುವುದು ಪ್ರಧಾನ ವಾದ ಕರ್ತವ್ಯವಾಗಬೇಕು.ಹಿರಿಯರು ಆರಾಧಿಸಿ ಕೊಂಡು ಬಂದ ಜಮೀನನ್ನು ಕಾಪಾಡಿ ಅಭಿವೃದ್ಧಿ ಗೊಳಿಸಿ ಮುನ್ನಡೆಯಬೇಕೆಂದು ಹೇಳಿ “ದೇಗುಲ ಪುನರ್ ನಿರ್ಮಾಣ ನಾಥ ಸಂಪ್ರದಾಯ, ತಪೋವನ ದ ಪುನಃರುಥಾನದ ಕಾಯಕವನ್ನು, ಎಲ್ಲರೂ ಸೇರಿ ಏಕಮನ ಒಮ್ಮತ ದಿಂದ ಮುಂದುವರಿಸಬೇಕು ಎಂದು ಅನುಗ್ರಹಿಸಿದರು.
ಅಂದು ನಡೆದ ಕಾರ್ಯಕ್ರಮವನ್ನು ಗುಡ್ಡೆಮಠ ದ ಶ್ರೀ ವೇಣುಗೋಪಾಲ್. ವಿ. ಭಟ್, ರವಿಶಂಕರ್. ವಿ. ಭಟ್,ಸ್ವಾಗತಿಸಿದರು, ಅನುವಂಶಿಕ ಅರ್ಚಕರಾದ ಪ್ರೆಮಚಂದ್ರ ಭಟ್ ಶ್ರೀಗಳಿಗೆ ಹಾರಾರ್ಪಣೆ ಗೈದು, ಯತಿನ್. ರಾ. ಭಟ್, ಶ್ರೀ ಗೋಪಾಲ್ ಜೋಗಿ, ನಾರಾಯಣ ಶೆಟ್ಟಿ ವರ್ಕಾಡಿ, ದಿನೇಶ ಕಾಜವ ಸೋಮೇಶ್ವರ, ಜ್ಞಾನೇಶ್ ಬಜಾಲ್, ಪ್ರಭಾಕರ್ ಶೆಟ್ಟಿ , ಉದಯ ಆಚಾರ್ಯ ಕಣ್ವತೀರ್ಥ, ಐತಪ್ಪ ಮಿಯಾಪದವು,ಕೃಷ್ಣ ಹೊಸಬೆಟ್ಟು ಉಪಸ್ಥಿತರಿದ್ದರು.