ಮಣಿಮುಂಡದಲ್ಲಿ ನೀರಸ ಮೌನಕ್ಕೆ ಜಾರಿದ ಬಿಜೆಪಿ ಹಾಗೂ ಎಡರಂಗ : ನಾಮಪತ್ರ ಸೂಕ್ಷ್ಮ ಪರಿಶೋಧನೆಗೆ ಮೊದಲೇ ಮುಸ್ಲಿಂಲೀಗ್ ಅಭ್ಯರ್ಥಿ ಅವಿರೋಧ ಆಯ್ಕೆ

ಮಂಜೇಶ್ವರ : ಸ್ಥಳೀಯಾಡಳಿತ. ಚುನಾವಣೆಯ ನಾಮಪತ್ರ ಸೂಕ್ಷ್ಮ ಪರಿಶೋಧನೆಗೆ ಮೊದಲೇ ಕಳೆದ ಸಲ ಬ್ಲಾಕ್ ಪಂಚಾಯತು ಅಧ್ಯಕ್ಷ ಪದವಿಯನ್ನು ಅಲಂಕರಿಸಿದ್ದ ಮುಸ್ಲಿಂಲೀಗ್ ಅಭ್ಯರ್ಥಿ ಮಂಗಲ್ಪಾಡಿ ಗ್ರಾ. ಪಂ. ನ ಮಣಿಮುಂಡ ವಾರ್ಡಿನಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.

ಮಂಗಲ್ಪಾಡಿ ಗ್ರಾ. ಪಂ. ನ 24ನೇ ವಾರ್ಡು ಮಣಿಮುಂಡ ದಲ್ಲಿ ಮುಸ್ಲಿಂಲೀಗ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಮೀಮ ಟೀಚರ್ ಅವಿರೋಧವಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಕೋಡಿಬೈಲ್ ನಿಂದ ಪಂಚಾಯತು ಸದಸ್ಯರಾಗಿ ಆಯ್ಕೆಯಾದ ಶಮೀನಾ ಟೀಚರ್ 2020 – 25 ರ ಕಾಲಾವಧಿಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷರಾಗಿದ್ದರು. ಇದೀಗ ಮಂಗಲ್ಪಾಡಿ ಪಂಚಾಯತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವರ ವಿರುದ್ಧ ಬಿಜೆಪಿ ಮತ್ತು ಎಡರಂಗದಿಂದ ಅಭ್ಯರ್ಥಿಗಳೇ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಯಾಗದ ಕಾರಣ ಅವಿರೋಧ ಆಯ್ಕೆ ನಡೆದಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದು ಮುಸ್ಲಿಂಲೀಗಿನ ಭದ್ರಕೋಟೆಯಾದರೂ ಕಳೆದ ಗ್ರಾ. ಪಂ. ಚುನಾವಣೆಯಲ್ಲಿ ಇಲ್ಲಿ ಮುಸ್ಲಿಂಲೀಗಿಗೆ ಸೋಲುಂಟಾಗಿತ್ತು. ಲೀಗ್ ವಿರುದ್ಧ ಎಡರಂಗ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಪಕ್ಷೇತರನಿಗೆ ಬೆಂಬಲಿಸಿದ ಕಾರಣ ಮುಸ್ಲಿಂಲೀಗಿಗೆ ಸೋಲುಂಟಾಗಿತ್ತು. ಮುಸ್ಲಿಂಲೀಗ್ ವಿರುದ್ಧ ಗೆದ್ದ ಸ್ವತಂತ್ರ ಅಭ್ಯರ್ಥಿ ಮೆಹಮೂದ್ ಆ ಬಳಿಕ ಪಂಚಾಯತಿನಲ್ಲಿ ಲೀಗ್ ಬೆಂಬಲಿಗರಾಗಿದ್ದರು.

ನಾಮಪತ್ರಿಕೆ ಸಲ್ಲಿಸಲು ಕೊನೆಯದಿನವಾದ ಶುಕ್ರವಾರ ಮುಸ್ಲಿಂ ಲೀಗ್ ಅಭ್ಯರ್ಥಿ ಅಲ್ಲದೇ ಮತ್ಯಾರೂ ನಾಮಪತ್ರಿಕೆ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಉಂಟಾಗಿದೆ. ಈ ವಾರ್ಡಿನಲ್ಲಿ ಬಿಜೆಪಿಗೆ ಸುಮಾರು 160ಮತಗಳಿವೆ. ಎಡರಂಗಕ್ಕೂ 200ರಷ್ಟು ಮತಗಳಿವೆ. ಆದರೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!