ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರಿನಲ್ಲಿ ಸತ್ಯ ಸಾಯಿ ಬಾಬಾರವರ ನೂರನೇ ಜನ್ಮ ದಿನೋತ್ಸವದಂದು ಕನ್ನಡ ಮಕ್ಕಳ ಹಸ್ತಪ್ರತಿ “ಬೆಳಕು”ಮತ್ತು ಭಿತ್ತಿ ಪತ್ರ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಗೊಂಡಿತು.
“ಬೆಳಕು” ಕನ್ನಡ ಸಂಘ ದ ಭಿತ್ತಿ ಪತ್ರವನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ಸತ್ಯಸಾಯಿ ಸೇವಾ ಟ್ರಸ್ಟ್ ಬಾಯಾರು ಇದರ ಉಪಾಧ್ಯಕ್ಷರಾದ ಪೆಲತಡ್ಕ ರಾಮಕೃಷ್ಣ ಭಟ್ ಇವರ ದಿವ್ಯ ಹಸ್ತದಿಂದ ಅನಾವರಣಗೊಂಡಿತು.ವಿದ್ಯಾರ್ಥಿಗಳ ಕಿರುಚಿತ್ರ ಇದೇ ಸಂಧರ್ಭದಲ್ಲಿ ಬಿಡುಗಡೆಗೊಂಡಿತು.
ನಗರ ಸಂಕೀರ್ತನೆ ,ಶುಚಿತ್ವ ನಂತರ,ಸಾಯಿಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಸಾಯಿ ಸಂದೇಶ ಯಾತ್ರೆ ಯ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ಪೆಲತಡ್ಕ ರಾಮಕೃಷ್ಣ ಭಟ್ ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿ ಸ್ವಾಮಿಯ ಪವಾಡ ಮತ್ತು ಉತ್ತಮಸಮಾಜ ಚಿಂತನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯಿತ್ತರು. ಕೋಶಾಧಿಕಾರಿಯಾದ ಶ್ರೀ ಮಾಣಿಪ್ಪಾಡಿ ನಾರಾಯಣ ಭಟ್ ಅವರಿಂದ ಸ್ವಾಮಿ ಅವತಾರದ ಸತ್ಸಂಗ ಚಿಂತನ ಮೌಲ್ಯವಾದ ವಿಚಾರವನ್ನು ವಿಧ್ಯಾರ್ಥಿಗಳಿಗೆ ತಿಳಿಸಿದರು, ಶ್ರೀ ಕಟ್ಟದ ಮನೆ ಗೋಪಾಲಕೃಷ್ಣಭಟ್,ಪುರೋಹಿತರಾದ ಶ್ರೀ ರಾಮ ಕಿಶೋರ್ ಭಟ್,ವ್ಯವಸ್ಥಾಪಕರಾದ ಶ್ರೀ ಎಚ್ ಮಹಾಲಿಂಗ ಭಟ್,ಟ್ರಸ್ಟ್ ಸದಸ್ಯರಾದ ಶ್ರೀ ಪಯ್ಯರ ಕೋಡಿ ಸದಾಶಿವ ಭಟ್,ಪ್ರಾಂಶುಪಾಲರಾದ ಶ್ರೀ ವಾಮನನ್,ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಕ್, ಚೆಂಡೆ ಗುರುಗಳಾದ ಶ್ರೀ ರಮೇಶ್ ಪಣಿಕ್ಕರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಧನುಷ್ ಮತ್ತು ಮಲ್ಲಿಕಾರ್ಜುನ ನಿರೂಪಿಸಿ,ಪ್ರಾಂಶುಪಾಲರಾದ ಶ್ರೀ ವಾಮನನ್ ಸ್ವಾಗತಿಸಿ , ಕನ್ನಡ ಶಿಕ್ಷಕಿ ಶ್ರೀಮತಿ ಕವಿತಾ ವಂದನಾರ್ಪಣೆಗೈದರು.
ಸಾಯಿಬಂದುಗಳ ಜತೆ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಮತ್ತು ಪ್ರಶಾಂತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಾಮಿಯ ಮಂಗಳಾರತಿ ಯೊಂದಿಗೆ ಜೂಲೋತ್ಸವ ನಡೆಯಿತು.