ಸತ್ಯಸಾಯಿ ಬಾಬಾ ರ ಶತಾಬ್ದಿ ಮತ್ತು ನವಚೇತನ ಕೇರ್ ಸೆಂಟರ್ ಲೋಕಾರ್ಪಣೆ

ದೈಗೋಳಿ : ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿಯಲ್ಲಿ ಸತ್ಯ ಸಾಯಿ ಬಾಬಾರವರ ಶತಾಬ್ದಿ ಉತ್ಸವ ಮತ್ತು ನೂತನವಾಗಿ ನಿರ್ಮಿಸಲಾದ ನವಚೇತನ ಸೆಂಟರ್ ನ ಲೋಕಾರ್ಪಣೆಯು ತಾ. 23 ಭಾನುವಾರದಂದು ನಡೆಯಿತು. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾ ಸ್ವಾಮಿಗಳು ಕೇರ್ ಸೆಂಟರ್ ನ್ನು ಲೋಕಾರ್ಪಣೆ ಗೈದರು.


ಬೆಳಗ್ಗೆ 9 ರಿಂದ ಧನ್ವಂತರಿ ಪೂಜೆ ನಡೆದು ನಂತರ ಬೃಜೇಶ್ ಚೌಟ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಮಣಿಪಾಲ ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ರವರು ಜಾಲತಾಣ ಲೋಕಾರ್ಪಣೆಗೈದರು.


ಈ ಸಂದರ್ಭದಲ್ಲಿ ವೇದಮೂರ್ತಿ ಶ್ರೀ ಬೋಳಂತಕೋಡಿ ರಾಮ ಭಟ್ , ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಶ್ರೀ .ಎಚ್ ಮಹಾಲಿಂಗ ಭಟ್ ,ರವರು ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ವಿಜಯಲಕ್ಷ್ಮಿ ಸುಭ್ರಮಣ್ಯ ಇವರಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!