ಕಾಸರಗೋಡು: ಎರಿಕ್ಕುಲಂ ವಲಿಯ ಪಾರಾದಲ್ಲಿ ಪೂರಕ ಶಿಲಾ ಅಧ್ಯಯನದ ವೇಳೆ, 20 ಚದರ ಮೀಟರ್ ಪ್ರದೇಶದಲ್ಲಿರುವ ‘ಕರಿಂಪರಾ’ ಬಂಡೆಯಲ್ಲಿ ಇನ್ನೂ ಎರಡು ಹೊಸ ಶಿಲಾ ವರ್ಣಚಿತ್ರಗಳು ಪತ್ತೆಯಾಗಿವೆ ಕೇರಳ ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳ ಪರಿಶೀಲನೆಯ ವೇಳೆ ಈ ಪತ್ತೆ ನಡೆದಿದೆ.ಹೊಸವಾಗಿ ಕಂಡುಬಂದಿರುವ ಚಿತ್ರಗಳು ಎಂಟುಕುಡುಕ ಮತ್ತು ಅರಿಯಟ್ಟ ಪಾರಾ ಪ್ರದೇಶಗಳಲ್ಲಿ ಕಂಡುಬರುವ ದನಗಳ ಆಕೃತಿಗಳನ್ನು ಹೋಲುತ್ತವೆ ಪ್ರಾಣಿಗಳ ಚಿತ್ರಗಳು ನೈಋತ್ಯ ದಿಕ್ಕಿಗೆ ಸಾಗುವ ರೀತಿಯಲ್ಲಿ ಕತ್ತಲ್ಪಟ್ಟಿರುವುದು ಗಮನಾರ್ಹ.
ಶತಮಾನಗಳ ಹಿಂದೆ ಮಹಾರಾಷ್ಟ್ರದ ರತ್ನಗಿರಿಯಿಂದ ವಯನಾಡಿನವರಗಿನ ಕೆಂಪು ಬಂಡಗಳ ಮೇಲೆ ತೀಕ್ಷ ಉಪಕರಣಗಳಿಂದ ರಚಿಸಲ್ಪಟ್ಟ ಶಿಲಾ ವರ್ಣಚಿತ್ರಗಳಲ್ಲಿ ಎರಿಕ್ಕುಲಂ ವಲಿಯ ಪಾರಾದ ಕಲೆಗಳು ಪ್ರಮುಖ ಸ್ಥಾನ ಪಡೆದಿವೆ ಎಂದು ಹಿರಿಯ ಪುರಾತತ್ವ ತಜ್ಞರು ಹೇಳುತ್ತಾರೆ.
ಈ ಅಧ್ಯಯನ ತಂಡದಲ್ಲಿ ಕೆ. ಕೃಷ್ಣರಾಜ್, ಕೋಝಿಕ್ಕೋಡ್ ವಳಸ್ಸಿರಾಜ ವಸ್ತುಸಂಗ್ರಹಾಲಯ ಅಧಿಕಾರಿ ವಿ.ಎ. ವಿಮಲ್‌ಕುಮಾರ್, ಪುರಾತತ್ವ ಇಲಾಖೆಯ ಉತ್ಪನನ ಸಹಾಯಕ ಟಿ.ಪಿ. ನಿಬಿನ್ ಮತ್ತು ಸ್ಥಳೀಯ ಪುರಾತತ್ತ್ವಶಾಸ್ತ್ರ ಸತೀಶನ್ ಕಲಿಯಾನಂ ಸೇರಿದಂತ ಹಲವರು ಪಾಲ್ಗೊಂಡಿದ್ದರು.
ಇತ್ತೀಚೆಗೆ, ನಹರು ಕಾಲೇಜು ಇತಿಹಾಸ ವಿಭಾಗದ ಸಂಶೋಧಕ ಡಾ. ನಂದಕುಮಾರ್ ಕೊರೋತ್ ಸತೀಶನ್ ಕಲಿಯಾನಂ ಮತ್ತು ಬರೋಡಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಅಸ್ಮಾ ಜಿಜಿ ಹಾಗೂ ಅನಘಾ ಶಿವರಾಮಕೃಷ್ಣನ್ ನೇತೃತ್ವದ ವೀಕ್ಷಣೆಯಲ್ಲಿ ವಲಿಯವರದಲ್ಲಿ ಗಿಡುಗ ಮತ್ತು ಹಾವನ್ನು ಹೋಲುವ ಶಿಲಾ ವರ್ಣಚಿತ್ರಗಳು ಪತ್ತೆಯಾಗಿದ್ದವು.
ಪುರಾತತ್ವ ಇಲಾಖೆಯ ತಂಡವು ಕಾಂಜಿರವೊಯಿಲ್ ಬಳಿ ಇರುವ ಹೆಜ್ಜೆ ಗುರುತುಗಳ ಶಿಲಾ ವರ್ಣಚಿತ್ರಗಳು ಹಾಗೂ ಮಡಿಕ್ಕ ಪಂಚಾಯತ್‌ನ ವಿವಿಧ ಪ್ರದೇಶಗಳಲ್ಲಿ ಕಂವು ಬಂಡೆಯಿಂದ ಕತ್ತಿದ ಸಣ್ಣ ಗುಹೆಗಳನ್ನೂ ಪರಿಶೀಲಿಸಿದೆ.
Really insightful article! It’s amazing how accessible classic games are becoming – no downloads needed, just instant play. I’ve been revisiting some old favorites, like those found with free solitaire, and it’s a great mental break! 👍