ಶಬರಿಮಲೆ ಲೂಟಿ ಮಾಡಿದ ಪಕ್ಷಕ್ಕೆ ವೋಟ್ ನೀಡಬೇಡಿ -ಕಿಶೋರ್ ಕುಮಾರ್

ಮಿಯಪದವು : ಕೇರಳ ದಲ್ಲಿ ಎಡರಂಗ ಮತ್ತು ಕಾಂಗ್ರೆಸ್, ಮುಸ್ಲಿಂ ಲೀಗ್ ಪಕ್ಷಗಳಿಗೆ ಪಕ್ಷ ತತ್ವ ಸಿದ್ದಂತಗಳಿಲ್ಲ ಅವರದ್ದು ಅಧಿಕಾರಕಾಗಿ ಅವಕಾಶ ರಾಜಕಾರಣ. ಸ್ಥಳೀಯಡಳಿತ ಚುನಾವಣೆ ಯಲ್ಲಿ ಗ್ರಾಮ ಗ್ರಾಮಗಲ್ಲಿ ಬಿಜೆಪಿ ಯನ್ನು ಗೆಲ್ಲಿಸಿ ಆಡಳಿತ ಬಿಜೆಪಿ ಗೆ ನೀಡಬೇಕು.
ಶಬರಿಮಲೆ ಯಲ್ಲಿ ಲೂಟಿ ಮಾಡಿ ಜೈಲು ಸೇರಿರುವ ಎಡರಂಗಕ್ಕೆ ಅಸ್ತಿಕ ಬಂಧುಗಳು ವೋಟ್ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಕು. ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯ ಬಿಜೆಪಿ ನೇತಾರ ಕಿಶೋರ್ ಕುಮಾರ್ ಹೇಳಿದರು.ಮೀoಜ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟನೆ ಮಾಡಿ ಅವರು ಮಾತನಾಡಿದರು.


ಪಂಚಾಯತ್ ಸಮಿತಿ ಅಧ್ಯಕ್ಷ ಬೆಜ್ಜ ಚಂದ್ರಹಾಸ ಅಧ್ಯಕ್ಷತೆ ವಹಿಸಿದ್ದರು.ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಮುಖಂಡ ರಾದ ಮಾದು ವಲಪಿಲ್ಲ, ಸಲೀಲ್ ಮಾಸ್ಟರ್, ಪದ್ಮನಾಭ ರೈ,ಮುಂದಿಲ ಶಂಕರ ನಾರಾಯಣ, ಹಾಗೂ ಅಭ್ಯರ್ಥಿ ಗಳು ಉಪಸ್ಥಿತಿ ಇದ್ದರು.ಕರುಣಾಕರ ರೈ, ಸ್ವಾಗತಿಸಿ ಕೃಷ್ಣ ಬೆಜ್ಜ ಧನ್ಯವಾದ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!