ತ್ರಿಸ್ತರ ಚುನಾವಣೆ ಜಿಲ್ಲೆಯಲ್ಲಿ 74.89ಶೇ. ಮತದಾನ

ಮಂಜೇಶ್ವರ : ನಿನ್ನೆ ನಡೆದ ತ್ರಿಸ್ತರ ಚುನಾವಣೆಯಲ್ಲಿ ಮತದಾರರು ಬಿರುಸಿನಿಂದ ಮತದಾನಗೃದಿದ್ದಾರೆ, ಸಂಜೆ 6ಗಂಟೆಯ ತನಕ ಜಿಲ್ಲೆಯಲ್ಲಿ 74.89ಶೇ. ಮತದಾನ ನಡೆದಿದೆ. ಅನೇಕ ಮತಗಟ್ಟೆಗಳಲ್ಲಿ ಮತಯಂತ್ರಗಳ ತೊಂದರೆಯಿಂದಾಗಿ ಮತ್ತು ಮತದಾರರ ಸರದಿ ಸಾಲುಗಳಿದ್ದ ಕಾರಣ 6ಗಂಟೆ ದಾಟಿಯೂ ಮತದಾನ ಮುಂದುವರಿದಿದೆ.


ಕೆಲವೊಂದು ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದ್ದರೂ ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.ಜಿಲ್ಲೆಯಲ್ಲಿ ಪ್ರಸಕ್ತ ವರದಿಯಂತೆ 814997 ಮಂದಿ ಮತದಾನ ಗೈದರು. ಈಪೈಕಿ 366957 ಪುರುಷರು ಮತ್ತು 448038 ಮಹಿಳೆಯರು ಹಾಗೂ ಇಬ್ಬರು ಟ್ರಾನ್ಸ್ ಜೆಂಡರ್ಸ್ ಒಳಗೊಂಡಿದ್ದಾರೆ.

ಒಟ್ಟು 1112190ಮತದಾರರು ಜಿಲ್ಲೆಯಲ್ಲಿದ್ದಾರೆ. ಈ ಪೈಕಿ 74.89 ಶೇ. ಮಂದಿ ಮತದಾನಮಾಡಿದರು.ಕಾಞಂಗಾಡು ನಗರಭೆ (72.73ಶೇ), ಕಾಸರಗೋಡು ನಗರಸಭೆ (66.94 ಶೇ.), ನೀಲೇಶ್ವರ ನಗರಸಭೆ (77.24ಶೇ.)ಮತದಾನ ದಾಖಲಾಗಿದೆ.

ಬ್ಲಾಕ್ ಪಂಚಾಯತ್ ಗಳ ಪೈಕಿ ಮಂಜೇಶ್ವರ (69.97 ಶೇ), ಕಾಸರಗೋಡು (70.29ಶೇ), ಕಾರಡ್ಕ (77.02ಶೇ.), ಪರಪ್ಪ (74.69ಶೇ.), ಕಾಞಂಗಾಡು (74.028.), ថ (78.95 8. )ಮತದಾನವಾಗಿದೆ.

ಅತ್ಯುತ್ತರ ಕೇರಳದ ಏಳು ಜಿಲ್ಲೆಗಳ 604 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಯಿತು. ಅನೇಕ ಕಡೆ ಮತದಾನ ಯಂತ್ರ ಕೈಕೊಟ್ಟು ಮತದಾನ ಸ್ಥಗಿತಗೊಂಡ ಕಾರಣ ಸಂಜೆ 6ಗಂಟೆಯ ಅವಧಿ ಮುಗಿದರೂ, ಸರದಿ ಸಾಲಲ್ಲಿ ನಿಂತವರಿಗೆ ಮತದಾನ ಮಾಡುವ ಅವಕಾಶ
ಒದಗಿಸಲಾಯಿತು.
ಮತದಾನದಲ್ಲಿ ಪುರುಷರಿಗಿಂತಲೂ ಅಧಿಕ ಉತ್ಸಾಹ ಮತ್ತು ಆವೇಶದಿಂದ ಮಹಿಳೆಯರು ಪಾಲ್ಗೊಂಡಿದ್ದು, 45659933ಮಂದಿ ಮಹಿಳೆಯರು ಮತ ಚಲಾಯಿಸಿದ್ದಾರೆ. ಮತದಾನ ಮಾಡಿದವರಲ್ಲಿ ಇಬ್ಬರು ಟ್ರಾನ್ಸ್ ಜೆಂಡರಸ್ ಒಳಗೊಂಡಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಸುಗಮ, ಸರಳ ಮತ್ತು ಶಾಂತರೀತಿಯ ಚುನಾವಣೆಗೆ ಸಹಕರಿಸಿದ ಮತದಾರರಿಗೆ, ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಮತ್ತು ಚುನಿವಣಾ ಕರ್ತವ್ಯ ನಿರತ ಸಿಬಂದಿಗಳಿಗೆ ಜಿಲ್ಲಾಧಿಕಾರಿ ಕೃತಜ್ಞತೆ ಸಲ್ಲಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!