ಜಿಲ್ಲೆಯ ಹಲವು ಪಂಚಾಯತ್‌ಗಳಲ್ಲಿ ಎಡರಂಗದ ಆಡಳಿತಕ್ಕೆ ಹಿನ್ನಡೆ- ಮೀಂಜದಲ್ಲೂ ಎಡರಂಗಕ್ಕೆ ಕೈತಪ್ಪಿದ ಆಡಳಿತ

ಮಂಜೇಶ್ವರ: ಜಿಲ್ಲೆಯ ಹಲವು ಪಂಚಾಯತ್‌ಗಳಲ್ಲಿ ಎಡರಂಗದ ಆಡಳಿತಕ್ಕೆ ಹಿನ್ನಡೆಯಾಗಿರುವಂತೆಯೇ ಮೀಂಜದಲ್ಲೂ ಎಡರಂಗ ಆಡಳಿತ ಕೈತಪ್ಪಿದೆ.ಇಲ್ಲಿ ಕಳೆದಬಾರಿ ಸಿಪಿಐಗೆ 3 ಸೀಟು ಲಭಿಸಿದ್ದು, ಎಡರಂಗಕ್ಕೆ ಒಟ್ಟು 5 ಸ್ಥಾನ ಲಭಿಸಿತ್ತು. ಆದರೆ ಈ ಬಾರಿ ಸಿಪಿಎಂಗೆ ಒಂದು ಸ್ಥಾನ ಮಾತ್ರ ಲಭಿಸಿದೆ. ಕಳೆದಬಾರಿ ಆರು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ 1 ಸೀಟು ಹೆಚ್ಚಿಸಿಕೊಂಡಿದೆ. ಈ ಬಾರಿ ಇಲ್ಲಿ ಯುಡಿಎಫ್ 9 ಸೀಟುಗಳನ್ನು ಪಡೆದು ಆಡಳಿತವನ್ನು ತನ್ನದಾಗಿಸಿದೆ.

ಮಂಜೇಶ್ವರದಲ್ಲಿ ಯುಡಿ ಎಫ್ ಸಂಭ್ರಮಾಚರಣೆ ನಡೆಸಿದೆ. ತೂಮಿನಾಡಿನಿಂದ ಮಂಜೇಶ್ವರ ಅಂಡರ್ ಪಾಸ್ ತನಕ ಸಂಭ್ರಮಾಚರಣೆ ನಡೆಯಿತು.
ತ್ರಿಸ್ತರ ಪಂಚಾಯತುಗಳಲ್ಲಿ ವಿಜಯಿಗಳಾದ ಜನಪ್ರತಿನಿಧಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು..

ಇದೇ ರೀತಿ ಮಂಗಲ್ಪಾಡಿ ಪಂಚಾಯತ್‌ನಲ್ಲೂ ಯುಡಿಎಫ್ ಅಧಿಕಾರಕ್ಕೇರಲಿದೆ. ಇಲ್ಲಿ ಕಳೆದಬಾರಿ ಕಾಂಗ್ರೆಸ್ ಸೇರಿ ಯುಡಿಎಫ್‌ ಅಧಿಕಾರದಲ್ಲಿದ್ದರೆ ಈ ಬಾರಿ ಕೇವಲ ಮುಸ್ಲಿಂ ಲೀಗ್ ಮಾತ್ರವೇ ಗೆದ್ದು ಪಂಚಾಯತ್ ಅಧಿಕಾರವನ್ನು ಸ್ವಂತವಾಗಿಸಿದೆ.

19 ವಾರ್ಡ್‌ಗಳಲ್ಲಿ ಮುಸ್ಲಿಂ ಲೀಗ್ ಗೆದ್ದಿದೆ. ಇದರಲ್ಲಿ 1 ವಾರ್ಡ್ ನಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಪಂಚಾಯತ್‌ನ 13 ಮತ್ತು 17ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಲೀಗ್‌ನ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದು ಆದರೆ ಇಲ್ಲಿ ಎರಡೂ ಕಡೆ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಇದರಿಂದಾಗಿ ಕಳೆದಬಾರಿ ಇದ್ದ 2 ಸೀಟನ್ನು ಈ ಬಾರಿ ಕಾಂಗ್ರೆಸ್ ಕಳೆದುಕೊಂಡಿದೆ. ಇದೇ ವೇಳೆ ಬಿಜೆಪಿ 3 ಸೀಟಿನಲ್ಲಿ ಜಯಗಳಿಸಿದೆ. ಎಡರಂಗ 2ರಲ್ಲಿ ಗೆಲುವು ಸಾಧಿಸಿದೆ. ಕಳೆದ 50 ವರ್ಷಗಳಿಂದ ಇಲ್ಲಿ ಯುಡಿಎಫ್ ಅಧಿಕಾರದಲ್ಲಿದ್ದು ಈ ಬಾರಿ ಲೀಗ್ ತನ್ನ ಸ್ವಂತ ನೆಲೆಯಲ್ಲಿ ಅಧಿಕಾರ ಪಡೆದುಕೊಂಡಿದೆ.

ಪೈವಳಿಕೆ ಪಂ.ನಲ್ಲಿ ಒಟ್ಟು ಇರುವ 21 ವಾರ್ಡ್‌ಗಳ ಪೈಕಿ ಯುಡಿಎಫ್ 9ರಲ್ಲಿ ಜಯಗಳಿಸಿ ಅತ್ಯಧಿಕ ಸ್ಥಾನಗಳಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಎಡರಂಗ 6 ಸ್ಥಾನಗಳಿಸಿದೆ. ಬಿಜೆಪಿ 5 ಹಾಗೂ ಸ್ವತಂತ್ರ ಅಭ್ಯರ್ಥಿಯೊಬ್ಬರು ಇಲ್ಲಿ ಜಯಗಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!