ಮಂಜೇಶ್ವರ : ಶಾಲಾ ವಿದ್ಯಾರ್ಥಿಯೊಬ್ಬ ಮನೆಯ ಮಲಗುವ ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 9ನೇ ತರಗತಿ ಹಾಗೂ ಬೆಳ್ಳೂರು ನೆಟ್ಟಣಿಗೆ ಕುಂಜತ್ತೋಡಿ ನಿವಾಸಿ ಜಯಕರ-ಅನಿತಾ ದಂಪತಿಯ ಪುತ್ರ
ವಿದ್ಯಾರ್ಥಿ ಪ್ರಜ್ವಲ್ (14) ಸಾವನ್ನಪ್ಪಿದ ದುರ್ದೈವಿ.
ತಾಯಿ ಅನಿತಾ ಮುಳ್ಳೇರಿಯ ಶಾಲೆಯಲ್ಲಿ ಕಲಿಯುತ್ತಿರುವ ಪುತ್ರಿಯನ್ನು ಕರೆದುಕೊಂಡು ಬರಲು ತೆರಳಿ ಬಳಿಕ ಅವರು ಮರಳಿ ಮನೆಗೆ ತಲುಪಿದಾಗ ಪ್ರಜ್ವಲ್ ಮಲಗುವ ಕೊಠಡಿಯೊಳಗೆ ಶಾಲು ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಸ್ಥಳೀಯರು ಸೇರಿ ಪ್ರಜ್ವಲ್‌ನನ್ನು ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಿಲ್ಲ.
ಆದಿತ್ಯವಾರ ಪ್ರಜ್ವಲ್ ಅಜ್ಜಿ ಮನೆಗೆ ತೆರಳಿದ್ದಾನೆನ್ನಲಾಗಿದೆ. ಅಲ್ಲಿಂದ ಶಾಲೆಗೆ ಪರೀಕ್ಷೆ ಬರೆಯಲು ತಲುಪಿದ್ದಾನೆ. ಪರೀಕ್ಷೆ ಮಧ್ಯಾಹ್ನ ಬಳಿಕವೆಂದು ಭಾವಿಸಿ 11 ಗಂಟೆ ವೇಳೆ ಈತ ಶಾಲೆಗೆ ತಲುಪಿದ್ದಾನೆ. ಆದರೆ ಪರೀಕ್ಷೆ ಬೆಳಿಗ್ಗೆ ನಡೆದಿತ್ತು. ತರಗತಿಗೆ ತಲುಪಲು ವಿಳಂಬವಾಗಿ ದ್ದರೂ ಪ್ರಜ್ವಲ್‌ಗೆ ಪರೀಕ್ಷೆ ಬರೆಯಲು ಅನುಮತಿ ನೀಡಿರುವುದಾಗಿ ಶಾಲಾಧಿಕಾರಿಗಳು ಪೊಲೀಸರಲ್ಲಿ ತಿಳಿಸಿದ್ದಾರೆ.
ಓದಿನಲ್ಲಿ ಪ್ರಜ್ವಲ್ ಅಗ್ರಗಣ್ಯನಾಗಿದ್ದವ ಯಾಕಾಗಿ ಆತ್ಮಹತ್ಯೆಗೆ ಶರಣಾದನೆಂಬದು ಇನ್ನೂ ನಿಗೂಢ.