ರಾಜೀವ್ ಗಾಂಧಿ ಸ್ಮೃತಿ ದಿನಾಚರಣೆ ಯಶಸ್ವಿಗೊಳಿಸಲು ಕರೆ

ದಿವಂಗತ ಮಾಜಿ ಪ್ರಧಾನಿ, ಎಐಸಿಸಿ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧಿಯವರ ಸ್ಮೃತಿ ದಿನಾಚರಣೆಯನ್ನು ಮೇ ತಿಂಗಳ 21 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ತೀರ್ಮಾನಿಸಿದ್ದು, ಪ್ರಸ್ತುತ ಕಾರ್ಯಕ್ರಮ ಯಶಸ್ಹಿಗೊಳಿಸಲು ಪಕ್ಷದ ವಿವಿಧ ಹಂತಗಳ ನಾಯಕರು ಮತ್ತು ಕಾರ್ಯಕರ್ತರಲ್ಲಿ ಕರೆ ನೀಡಿದೆ.


ಹೊಸಂಗಡಿಯಲ್ಲಿ ನಡೆದ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ವಹಿಸಿದ್ದರು.
ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಖಲೀಲ್ ಬಜಾಲ್ ರಿಗೆ ಪಕ್ಷದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.


ಸಭೆಯಲ್ಲಿ ನೇತಾರರಾದ ಉಮ್ಮರ್ ಬೋರ್ಕಳ, ಚಂದ್ರಶೇಖರ ಶೆಟ್ಟಿ ಬೆಜ್ಜ, ಖಲೀಲ್ ಬಜಾಲ್, ಫಾರೂಕ್ ಶಿರಿಯ, ಮೊಹಮ್ಮದ್ ಮಜಾಲ್, ನಾಗೇಶ್ ಮಂಜೇಶ್ವರ, ಪಿ.ಎಂ.ಖಾದರ್ ಹಾಜಿ, ಹನೀಫ್ ಪಡಿಂಞಾರ್, ಯೋಗೇಶ್ ಉದ್ಯಾವರ, ಗಣೇಶ್ ಪಾವೂರು, ಅಜೀಜ್ ಕಲ್ಲೂರು, ಮೊಹಮ್ಮದ್ ಜೆ, ವಸಂತರಾಜ್ ಶೆಟ್ಟಿ, ಸದಾಶಿವ ಕೆ,ರಂಜಿತ್ ಮಂಜೇಶ್ವರ, ಅಬ್ದುಲ್ಲ ಮಾಸ್ಟರ್ ಮೂಡಂಬೈಲ್ ಮುಂತಾದವರು ಉಪಸ್ಥಿತರಿದ್ದರು. ಶ್ರೀ ದಿವಾಕರ್ ಎಸ್. ಜೆ.ಸ್ವಾಗತಿಸಿ, ಶ್ರೀ ಮುಹಮ್ಮದ್ ಸೀಗಂಡಡಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!