ಭಾರತೀಯ ಜನತಾ ಪಾರ್ಟಿ ಬಡಾಜೆ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಕೇರಳ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿನ ಬಡಾಜೆ ವಾರ್ಡಿನಲ್ಲಿ ಗೆದ್ದ ನೂತನ ಸದ್ಯಸ್ಯರನ್ನು ಅಭಿನಂದಿಸುವ ಕಾರ್ಯಕ್ರಕಾಮ ವೈ.ಎಸ್.ಬಿ ಮೈದಾನ ಬಡಾಜೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಹಿತ್ ಕುಮಾರ್ ಬಡಾಜೆ ಅವರು ವಹಿಸಿದರು , ಕಾಸರಗೋಡು ಬಿಜೆಪಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಕಾರ್ಯಕ್ರಮವನ್ನು ಉಧ್ಘಾಟಿಸಿದರು .ವೇದಿಕೆಯಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಸ್ವೀಕರಿಸಿದ ಕೀರ್ತೇಶ್ವರ ವಾರ್ಡ್ ಸದಸ್ಯರಾದ ಶ್ರೀ ಪ್ರಕಾಶ್ , ಬಡಾಜೆ ವಾರ್ಡ್ ಸದಸ್ಯೆ ಬೇಬಿ ಲತಾ, ಯಾದವ ಬಡಾಜೆ , ಮಂಜೇಶ್ವರ ಗ್ರಾಮ ಪಂಚಾಯತ್ 5 ನೆ ವಾರ್ಡ್ ಸದಸ್ಯೆ ಶ್ರೀಮತಿ ಆಶಾಲತಾ, ಬಿಜೆಪಿ ಕುಂಜತ್ತೂರ್ ವಲಯ ಅಧ್ಯಕ್ಷ ರಾಜೇಶ್ ಮಜಲು ಉಪಸ್ಥಿತರಿದ್ದರು .

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಬಿಜೆಪಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ವಿಜೇತರಾದ ಅಭ್ಯರ್ಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು “ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಬಡಾಜೆಯಲ್ಲಿ ನಡೆದಿದೆ ಆದುದರಿಂದಲೇ ಇನ್ನು ಮುಂದಿನ 5 ವರ್ಷ ಆಳ್ವಿಕೆ ಮಾಡಲು ಬಿಜೆಪಿ ಗೆ ಅವಕಾಶ ಸಿಕ್ಕಿದೆ ಶ್ರೀಮತಿ ಬೆಬಿಲತ ಅವರ ನೇತೃತ್ವದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲ್ಲಿ ಅದಕ್ಕೆ ನನ್ನ ಸಂಪೂರ್ಣ ಸಹಕಾರ ನೀಡಲು ನಾನು ಸದಾ ಸಿದ್ದ” ಎಂದರು. ಬಳಿಕ ಬಡಾಜೆ ವಾರ್ಡ್ ಸಮಿತಿಯ ಹಾಗು ಬೂತ್ ಸಮಿತಿಯ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಬಡಾಜೆ ವಾರ್ಡಿನಲ್ಲಿ ಬಿ.ಜೆಪಿ ಯಾ ಗೆಲುವಿಗೆ ಕಳೆದ 20 ವರ್ಷಗಳಿಂದ ಕೆಲಸಗಳನ್ನು ಮಾಡುತ್ತಿರುವ ಸುರೇಶ ಮಂಜೇಶ್ವರ ಚೌಕಿ, ಯಾದವ ಬಡಾಜೆ ಹಾಗು ಎಸ್ .ಐ.ಅರ್ ಫಾರಂ ಫಿಲ್ಲಿಂಗ್ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕುಮಾರಿ ವಂದಿತ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಪಕ್ಷದ ನೇತಾರರು , ಸದಸ್ಯರು , ಕಾರ್ಯಕರ್ತರು ಉಪಸ್ಥಿತರಿದ್ದರು .ಶ್ರೀ ಯಾದವ ಬಡಾಜೆ ಸ್ವಾಗತಿಸಿ , ಶೈಲೇಶ್ ಸ್ಪೂರ್ತಿ ನಗರ ವಂದಿಸಿದರು

SHARE
Loading spinner

One thought on “ಭಾರತೀಯ ಜನತಾ ಪಾರ್ಟಿ ಬಡಾಜೆ ವತಿಯಿಂದ ಅಭಿನಂದನಾ ಕಾರ್ಯಕ್ರಮ

Leave a Reply

Your email address will not be published. Required fields are marked *

error: Content is protected !!