ಕೇರಳದಲ್ಲಿ ಸಿನಿಮಾ–ಟೂರಿಸಂ ಯೋಜನೆಗಳನ್ನು ಜಾರಿಗೊಳಿಸುವುದರಿಂದ ರಾಜ್ಯದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯಲಿದೆ ಎಂದು ಕೇರಳದ ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಕಾರ್ಯಗಳ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಹೇಳಿದರು. 1995ರಲ್ಲಿ ಬಿಡುಗಡೆಯಾದ ಖ್ಯಾತ ಚಿತ್ರ ‘ಬಾಂಬೆ’ಯ ನಿರ್ದೇಶಕ ಮಣಿರತ್ನಂ, ನಾಯಕಿ ಮನೀಷಾ ಕೊಯ್ರಾಲಾ ಹಾಗೂ ಛಾಯಾಗ್ರಾಹಕ ರಾಜೀವ್ ಮೆನನ್ ಅವರೊಂದಿಗೆ ಬೇಕಲ್ ಕೋಟೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಸಚಿವರು ಈ ಮಾತುಗಳನ್ನು ಹೇಳಿದರು.
ಸಿನಿಮಾ–ಟೂರಿಸಂ ಯೋಜನೆಯ ಮೂಲಕ ಹಳೆಯ ಚಿತ್ರಗಳ ಲೊಕೇಶನ್‌ಗಳನ್ನು ಸಾರ್ವಜನಿಕರಿಗೆ ಪರಿಚಯಿಸಿ, ಅದರಿಂದ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಮತ್ತಷ್ಟು ವೃದ್ಧಿಸುವ ಉದ್ದೇಶದಿಂದ 30 ವರ್ಷಗಳ ಬಳಿಕ ಈ ವಿಶೇಷ ಭೇಟಿಯನ್ನು ಆಯೋಜಿಸಲಾಗಿದೆ. ಇದರ ಪ್ರಯೋಜನ ಬೇಕಲ್‌ಗೆ ಮಾತ್ರವಲ್ಲ, ಸಂಪೂರ್ಣ ಕೇರಳದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಶಕ್ತಿ ನೀಡಲಿದೆ ಎಂದು ಸಚಿವರು ತಿಳಿಸಿದರು.30 ವರ್ಷಗಳ ನಂತರ ತಮ್ಮ ಅತಿ ಪ್ರಿಯ ಚಿತ್ರದ ಲೊಕೇಶನ್‌ನಲ್ಲಿ ಮತ್ತೆ ಭೇಟಿಯಾಗಲು ಸಾಧ್ಯವಾದ ಸಂತಸವನ್ನು ಮಣಿರತ್ನಂ, ಮನೀಷಾ ಕೊಯ್ರಾಲಾ ಹಾಗೂ ರಾಜೀವ್ ಮೆನನ್ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಿ.ಎಚ್. ಕುಂಜಂಬು ಎಂಎಲ್‌ಎ, ಬೇಕಲ್ ರಿಸಾರ್ಟ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
‘ಬಾಂಬೆ’ ಚಿತ್ರದ ಪ್ರಸಿದ್ಧ ‘ಉಯಿರೇ’ ಹಾಡಿನ ದೃಶ್ಯಗಳು ಚಿತ್ರೀಕರಿಸಲಾದ ಬೇಕಲ್ ಕೋಟೆಯನ್ನು ಮತ್ತೆ ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸುವುದರ ಜೊತೆಗೆ, ಈ ಪ್ರದೇಶದ ಸಿನಿಮಾ–ಟೂರಿಸಂ ಸಾಧ್ಯತೆಗಳನ್ನು ಬಲಪಡಿಸುವ ಉದ್ದೇಶದಿಂದ ಬೇಕಲ್ ರಿಸಾರ್ಟ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಬಿಆರ್‌ಡಿಸಿ) ಹಾಗೂ ಕೇರಳ ಪ್ರವಾಸೋದ್ಯಮ ಇಲಾಖೆ ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತು. ಬಿಆರ್‌ಡಿಸಿಯ 30ನೇ ವಾರ್ಷಿಕೋತ್ಸವದ ಅಂಗವಾಗಿ ಈ ಖ್ಯಾತ ಚಲನಚಿತ್ರ ಕಲಾವಿದರ ಸಂಗಮ ನಡೆಯಿತು.
Barganhar plataforma, huh? Sounds Portuguese! Let’s see if I can snag a good deal here. Time to test my luck! barganhar plataforma