ಶ್ರೀ ವಾಸುಕೀ ನಾಗರಾಜ ರಕ್ತೇಶ್ವರೀ ಪರಿವಾರ ದೈವಗಳ ಪ್ರತಿಷ್ಠಾ ವರ್ಧಂತ್ಯುತ್ಸವ

ಪಾವೂರು: ಶ್ರೀ ವಾಸುಕೀ ನಾಗರಾಜ ರಕ್ತೇಶ್ವರೀ ಪರಿವಾರ ದೈವಗಳ ಸನ್ನಿದಿ ಪಾವೂರು ತಚ್ಛಿರೆಪದವಿನಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವವು ಇದೇ ಬರುವ ತಾರೀಕು 25 . 12 . 2025 ನೇ ಗುರುವಾರದಂದು ಬ್ರಹ್ಮ ಶ್ರೀ ವರ್ಕಾಡಿ ಹೊಸ ಮನೆ ರಾಜೇಶ ತಾಳಿತ್ತಾಯರ ನೇತೃತ್ವದಲ್ಲಿ ವಿವಿಧ ವೈಧಿಕ , ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.


ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಮಹಾ ಗಣಪತಿ ಹೋಮ , ಕಲಶ ಪೂಜೆ , ಪ್ರಧಾನ ಹೋಮ ,ಪಂಚಾಮೃತ ಅಭಿಷೇಕ , ಕಲಶಾಭಿಷೇಕ , ಆಶ್ಲೇಷ ಬಲಿ, ನಾಗತಂಬಿಲ, ಮಹಾಪೂಜೆ , ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಲಿರುವುದು.

ಸಂಜೆ ಶ್ರೀ ಸತ್ಯನಾರಾಯಣ ಪೂಜೆ , ದುರ್ಗಾ ಪೂಜೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ,ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಲಿರುವುದು.

SHARE
Loading spinner

One thought on “ಶ್ರೀ ವಾಸುಕೀ ನಾಗರಾಜ ರಕ್ತೇಶ್ವರೀ ಪರಿವಾರ ದೈವಗಳ ಪ್ರತಿಷ್ಠಾ ವರ್ಧಂತ್ಯುತ್ಸವ

Leave a Reply

Your email address will not be published. Required fields are marked *

error: Content is protected !!