ಮಂಜೇಶ್ವರ ಗ್ರಾಮ ಪಂಚಾಯತಿನ ನೂತನ ಆಡಳಿತ ಸಮಿತಿ ಸದಸ್ಯರ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

ಮಂಜೇಶ್ವರ ಗ್ರಾಮ ಪಂಚಾಯತಿನ ನೂತನ ಆಡಳಿತ ಸಮಿತಿ ಸದಸ್ಯರ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಭಾನುವಾರದಂದು ಮಂಜೇಶ್ವರದ ಗೋವಿಂದ ಪೈ ಗಿಳಿವಿಂಡುವಿನಲ್ಲಿ ಜರುಗಿತು. ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರು ಪದವಿ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಆಡಳಿತದ ಜವಾಬ್ದಾರಿ ವಹಿಸಿಕೊಂಡರು.

ಅದೇ ರೀತಿ ಮಂಗಲ್ಪಾಡಿ ಪಂಚಾಯತಿನಲ್ಲಿ ಅವಿರೋಧವಾಗಿ ಗೆದ್ದು ಬಂದ  ಯು ಡಿ  ಎಫ್ ಅಭ್ಯರ್ಥಿ ಶಮೀನಾ ಟೀಚರ್ ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷತೆಯಾಗಿತ್ತು. ಅದೇ ರೀತಿ ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಮೂವರು ಮಹಿಳಾ ಸದಸ್ಯರುಗಳು ಆಂಗ್ಲ ಭಾಷೆಯಲ್ಲಿ ಪ್ರತಿಜ್ಞಾ ಸ್ವೀಕರಿಸಿದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ  ಯುಡಿಎಫ್  ಭರ್ಜರಿ ಬಹುಮತ ಗಳಿಸಿದ್ದು, ಪಂಚಾಯತಿನ ಅಧಿಕಾರ ಸ್ಥಾನಕ್ಕೆ ಏರಲು ಸಜ್ಜಾಗಿದೆ. ಫಲಿತಾಂಶ ಪ್ರಕಟವಾದ ದಿನದಿಂದಲೇ ಪಂಚಾಯತ್ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಮುಂದಿನ ಆಡಳಿತದ ರೂಪುರೇಷೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಯುಡಿಎಫ್‌ನ ಪ್ರಮುಖ ಅಂಗ ಪಕ್ಷವಾದ ಮುಸ್ಲಿಂ ಲೀಗ್ ಸದಸ್ಯರೊಳಗೆ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಕಿತಾಪತಿ ನಡೆಯುತ್ತಿರುವುದು ಗಮನಾರ್ಹವಾಗಿದೆ. ಅಧ್ಯಕ್ಷ ಪದವಿ ಯಾರಿಗೆ ಒಲಿಯಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇನ್ನೂ ಲಭ್ಯವಾಗಿಲ್ಲ. ಸದಸ್ಯರ ಸಂಖ್ಯಾಬಲ, ಒಳಗಡೆ ನಡೆಯುತ್ತಿರುವ ಮಾತುಕತೆಗಳು ಹಾಗೂ ಒಮ್ಮತದ ಪ್ರಯತ್ನಗಳು ಅಂತಿಮ ತೀರ್ಮಾನದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.

ಒಟ್ಟಾರೆ, ನೂತನ ಆಡಳಿತ ಸಮಿತಿಯ ಪ್ರತಿಜ್ಞಾ ಸ್ವೀಕಾರದೊಂದಿಗೆ ಮಂಜೇಶ್ವರ ಗ್ರಾಮ ಪಂಚಾಯತ್ ರಾಜಕೀಯವಾಗಿ ಕುತೂಹಲದ ಹಂತಕ್ಕೆ ಪ್ರವೇಶಿಸಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಜನರು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

SHARE
Loading spinner

One thought on “ಮಂಜೇಶ್ವರ ಗ್ರಾಮ ಪಂಚಾಯತಿನ ನೂತನ ಆಡಳಿತ ಸಮಿತಿ ಸದಸ್ಯರ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

  1. Hey, I’ve been spinning the reels at Slotspalace10 lately and, I gotta say, it’s pretty decent! The game selection is solid and I even snagged a little win last week. Definitely worth checking out if you’re looking to try your luck. Check them out here slotspalace10.

    Loading spinner

Leave a Reply

Your email address will not be published. Required fields are marked *

error: Content is protected !!