ಹೊಸಂಗಡಿಯ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಉತ್ಸಾಹ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೇಸಿಗೆ ಶಿಬಿರಕ ಅದ್ದೂರಿಯಾಗಿ ನಡೆಯಿತು.ಈ ಶಿಬಿರವು ಮಕ್ಕಳಲ್ಲಿನ ವಿವಿಧ ಪ್ರತಿಭೆಗಳನ್ನು ಹೊರತೆಗೆದು ಅವುಗಳನ್ನು ಕಾರ್ಯಗತಗೊಳಿಸಲು ಅನುಕೂಲ ಮಾಡಿ ಕೊಟ್ಟಿತು.
ಈ ಶಿಬಿರದಲ್ಲಿ ವಿವಿಧ ಪ್ರಾಯೋಗಿಕ ಹಾಗೂ ಮನರಂಜನೆ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಈ ಪೈಕಿ ವಿದ್ಯಾರ್ಥಿಗಳಿಗೆ ಶಾರೀರಿಕ ತಾಳ್ಮೆ ಮತ್ತು ಆತ್ಮರಕ್ಷಣೆ ಕಲೆ ಕಲಿಸುವ ಉದ್ದೇಶದೊಂದಿಗೆ ಕರಾಟೆ ತರಬೇತಿ, ಸುಂದರ ಲಿಪಿ ಬರವಣಿಗೆಯ ಕಲೆ ಕ್ಯಾಲಿಗ್ರಫಿ ತರಭೇತಿ, ಶಾರೀರಿಕ ಆರೋಗ್ಯಕ್ಕಾಗಿ ವಿವಿಧ ಕ್ರೀಡೆಗಳೊಂದಿಗೆ ಹೊರಾಂಗಣ ಆಟಗಳು, ಕೈಗಾರಿಕ ಕಲೆಗಳ ಮೂಲಕ ಸೃಜನಶೀಲತೆಗೆ ಉತ್ತೇಜನವನ್ನು ನೀಡುವ ಕರಕುಶಲ ತರಗತಿ, ಕಲಾತ್ಮಕ ಮತ್ತು ಭಾಷಾ ಅಭಿವ್ಯಕ್ತಿಯನ್ನು ಉತ್ತೇಜಿಸಲು ಹಾಡುಗಾರಿಕೆ ಮತ್ತು ಕಥೆ ಹೇಳುವಿಕೆ, ಬಣ್ಣಗಳ ಜಗತ್ತಿನಲ್ಲಿ ಮಕ್ಕಳ ಕಲೆ ಹೊರಹೊಮ್ಮಿಸಲು ಚಿತ್ರಕಲೆ ಮತ್ತು ಚಿತ್ರಣಕ್ಕೆ ಅವಕಾಶ, ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಪಬ್ಲಿಕ್ ಸ್ಪೀಕಿಂಗ್ ಕೌಶಲ್ಯ ಹೆಚ್ಚಿಸಲು ಭಾಷಣ ಕಲೆ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ನೈತಿಕ ತರಗತಿಗಳು ನಡೆಯಿತು.
ಬೆಳಿಗ್ಗೆ ನಡೆದ ಬೇಸಿಗೆ ಶಿಬಿರವನ್ನು ಶಾಲಾ ಪ್ರಾಂಶುಪಾಲರಾದ ಶ್ರೀಯುತ ಅಬ್ದುಲ್ ಖಾದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೇಸಿಗೆ ಶಿಬಿರಗಳು ಮಕ್ಕಳಿಗೆ ವಿದ್ಯೆಯಲ್ಲಿನ ಹೊರತಾಗಿ ಜೀವನ ಕೌಶಲ್ಯ, ಕಲೆ, ಕ್ರೀಡೆ, ಸಂಸ್ಕೃತಿ ಮತ್ತು ಸಹಕಾರದ ಕುರಿತು ಅನುಭವ ಕಲಿಸಬಲ್ಲ ಸುವರ್ಣಾವಕಾಶ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ತಂಡದಲ್ಲಿ ಕೆಲಸ ಮಾಡುವ ಶಕ್ತಿ ಬೆಳೆಸಬಹುದು. ಈ ಶಿಬಿರದಲ್ಲಿ ಕಲೆ, ನೃತ್ಯ, ಸಂಗೀತ, ಚಿತ್ರಕಲೆ, ಕ್ರೀಡೆ, ಕರಾಟೆ ಮತ್ತು ಪರಿಸರ ಶಿಕ್ಷಣದಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದು ಮಕ್ಕಳನ್ನು ಬಹುಮುಖ ವ್ಯಕ್ತಿತ್ವದತ್ತ ದಾರಿತೋರುವ ಒಂದು ಚಿಕ್ಕ ಹೆಜ್ಜೆಯಾಗಿದೆ. ಎಂದು ಹೇಳಿ ಶಿಬಿರಕ್ಕೆ ಶುಭವನ್ನು ಹಾರೈಸಿದರು.
ಪೋಷಕರಿಗಾಗಿ ಹಮ್ಮಿಕೊಂಡ ಮಕ್ಕಳ ಬೆಳವಣಿಗೆಯ ಬಗ್ಗೆ ಅರಿವು ಮೂಡಿಸುವ ವಿಶೇಷ ತರಗತಿಯನ್ನು ಉದ್ದೇಶಿಸಿ ಮಹಮ್ಮದಲಿ ಸಲಫಿ ಯವರು ಮಾತನಾಡಿ (Byt 2) ಮಕ್ಕಳ ಬೆಳವಣಿಗೆಯ ಕುರಿತು ಚರ್ಚಿಸಲು. ಮಕ್ಕಳಿಗೆ ವಿದ್ಯೆ, ಸಂಸ್ಕಾರ, ಶಿಸ್ತು, ಆತ್ಮವಿಶ್ವಾಸ, ಹಾಗೂ ಮೌಲ್ಯಗಳು ಎಲ್ಲವೂ ಮನೆಯಲ್ಲಿಯೇ ಆರಂಭವಾಗುತ್ತವೆ. ಪೋಷಕರ ನಡೆ, ಮಾತು, ಭಾವನೆಗಳೇ ಮಕ್ಕಳಿಗೆ ಮೊದಲ ಪಾಠ. ಮಕ್ಕಳು ಎದುರಿಸುತ್ತಿರುವ ಲೋಕವನ್ನು ಅರ್ಥಮಾಡಿಕೊಳ್ಳಿ, ಹಾಗೂ ಅವರ ಬೆಂಬಲವಾಗಿ ನಿಂತು ಅವರ ಉಜ್ವಲ ಭವಿಷ್ಯ ಕಟ್ಟೋಣ. ಎಂದು ಹೇಳಿ ಶುಭವನ್ನು ಹಾರೈಸಿದರು.
ಈ ಸಂದರ್ಭ ಶಾಲಾ ಚೇಯರ್ಮ್ಯಾನ್ ಅಬ್ದುಲ್ ರಹ್ಮಾನ್ ಅರಿಮಲ, ಕೋರ್ಡಿನೇಟರುಗಳಾದ ಬದ್ರುದ್ದೀನ್, ರೋಶ್ನಿ, ಜುನೈದಾ, ಕರಾಟೆ ತರಭೇತಿದಾರರು, ಶಾಲಾ ಶಿಕ್ಷಕ ವೃಂದ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.
ಪೀಸ್ ಕ್ರಿಯೇಟಿವ್ ಶಾಲೆಯ ಈ ಹೆಜ್ಜೆ ನೂರಾರು ಮಕ್ಕಳ ಕಲಿಕೆಯಲ್ಲಿ ಹೊಸ ಬೆಳಕು ತರಲಿರುವುದಾಗಿ ಸೇರಿದ ಪೋಷಕರು ಅಭಿಪ್ರಾಯ ವ್ಯಕ್ತ ಪಡಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪೋಷಕರು ಅಧ್ಯಾಪಕರುಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.