ಮಂಜೇಶ್ವರ : ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ಮಂಜೇಶ್ವರ ಖಂಡ ಸಮಿತಿ ಜಿಲ್ಲಾ ಕಾರ್ಯಾಲಯ “ಪ್ರೇರಣಾ”ದ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಂಜೇಶ್ವರ ಖಂಡ ಸಮಿತಿಯ ಆಶ್ರಯದಲ್ಲಿ 16ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ದಿನಾಂಕ 28. 12. 2025ನೇ ಬಾನುವಾರ ವಿ.ಹಿಂ.ಪ ಜಿಲ್ಲಾ ಕಾರ್ಯಾಲಯ “ಪ್ರೇರಣಾ” ಹೊಸಂಗಡಿಯಲ್ಲಿ ಬ್ರಹ್ಮಶ್ರೀ ಬಡಾಜೆಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಗಳವರ ಪೌರೋಹಿತ್ಯದಲ್ಲಿ ಸಂಪನ್ನಗೊಳ್ಳಲಿರುವುದು.
ಬೆಳಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ , ಮಹಾಮಂಗಳಾರತಿ,ಧಾರ್ಮಿಕ ಸಭೆಯು ನಡೆಯಲಿರುವುದು. ಬೆಳಗ್ಗೆ ೧೧.೧೫ ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ,ವಜ್ರದೇಹಿ ಮಠ ಗುರುಪುರ ಆಶೀರ್ವಚನ ನೀಡಲಿದ್ದಾರೆ. . ಹೇರಂಭಾ ಇಂಡಸ್ಟ್ರೀಸ್ ಮುಂಬೈಯಾ ಮಾಲಕಾರದ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮುಂಬಯಿಯ ಉದ್ಯಮಿ ಶ್ರೀ ನಂದ ಕುಮಾರ್ ಕುಂಬ್ಳೆ , ಉದ್ಯಮಿ ಶ್ರೀ ಗಣೇಶ್ ರೈ ಬೆಂಗಳೂರು,ಬೆಂಗಳೂರಿನ ಖ್ಯಾತ ನ್ಯಾಯವಾದಿ, ಶ್ರೀ ಸಂದೇಶ್ ಉದ್ಯಾವರ ರವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ್ ಪ್ರಮುಖ್ ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸುಜಿ ಭಾಷಣ ಮಾಡಲಿರುವರು. ಕೇರಳ ಪ್ರಾಂತ ಕಾರ್ಯಾಧ್ಯಕ್ಷರಾದ ಶ್ರೀ ರಾಜಶೇಖರನ್ ಜೀ,ಕೇರಳ ಪ್ರಾಂತ ಬಿ.ಎಂ.ಎಸ್ ಉಪಾಧ್ಯಕ್ಷರು ಅಡ್ವಕೇಟ್ ಶ್ರೀ ಮುರಳೀಧರ್ ಕಾಸರಗೋಡು ,ಬಿ.ಹೆಚ್.ಪಿ ಪ್ರಾಂತ ಸಹ-ಕಾರ್ಯದರ್ಶಿ :ಶ್ರೀ ಶರಣ್ ಪಂಪ್ವೆಲ್ ರವರು ಮುಖ್ಯ ಅಥಿತಿಗಳಾಗಿ ಉಪಸ್ಥಿತರಿರುವರು.
ವಿ.ಹೆಚ್.ಪಿ ಮಂಜೇಶ್ವರ ಖಂಡ ಸಮಿತಿಯ ಅಧ್ಯಕ್ಷರಾದ ಶ್ರೀ ತಾರಾನಾಥ್ ,ವಿ .ಹಿಂ.ಪ ಮಾತೃ ಶಕ್ತಿ ಪ್ರಮುಖ್, ಕಾಸರಗೋಡು ಜಿಲ್ಲೆ ಶ್ರೀಮತಿ ಮೀರಾ ಆಳ್ವ ,ಮಂಜೇಶ್ವರ ಖಂಡ ಸಮಿತಿಯ ಬಜರಂಗದಳ ಸಂಯೋಜಕರು ಶ್ರೀ ಅಭಿಲಾಷ್ ಬೆಂಗ್ರೆ ಉಪಸ್ಥಿತಿರುವರು.ಸಭಾಕಾರ್ಯಕ್ರಮದ ನಂತರ ಕುಣಿತ ಭಜನೆ ಕಾರ್ಯಕ್ರಮವು ನಡೆಯರುವುದು .