ಎಕೆಪಿಎ ಕಾಸರಗೋಡು ವೆಸ್ಟ್ ಘಟಕದಿಂದ ಹೊಸ ವರ್ಷಾಚರಣೆ

ಕಾಸರಗೋಡು : ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ​​(ಎಕೆಪಿಎ) ಕಾಸರಗೋಡು ವೆಸ್ಟ್ ಘಟಕದ ವತಿಯಿಂದ ಹೊಸ ವರ್ಷಾಚರಣೆ ಆಚರಿಸಲಾಯಿತು.

ಆಶ್ರಿತ್ ರೈಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವೆಸ್ಟ್ ಘಟಕದ ಅಧ್ಯಕ್ಷರಾದ ವಸಂತ್ ಕೆರೆಮನೆ ಅಧ್ಯಕ್ಷತೆ ವಹಿಸಿದರು. ದೀಪಾವಳಿ ಹಾಗೂ ಕೇರಳ ಪಿರವಿ ಅಂಗವಾಗಿ ಎಕೆಪಿಎ ಸದಸ್ಯರಿಗೆ ಕಾಸರಗೋಡು ವಲಯ ಮಟ್ಟದಲ್ಲಿ ನಡೆಸಿದ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ನೀಡಲಾಯಿತು.

ಕಾಸರಗೋಡಿನ ಹಿರಿಯ ಪತ್ರಕರ್ತ ಹಾಗೂ ಲೇಖಕರಾದ ಶ್ರೀ ಪ್ರದೀಪ್ ಬೇಕಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಛಾಯಾಚಿತ್ರ ಹಾಗೂ ಪತ್ರಿಕಾ ಮಾಧ್ಯಮವು ಒಂದೇ ನಾಣ್ಯದ ಎರಡು ಮುಖ ಹಾಗೂ ಫೋಟೋ ಇದ್ದರೆ ಮಾತ್ರ ಪತ್ರಕಾ ವರದಿಯು ಜನರಿಗೆ ತಿಳಿಯಲು ಸಾಧ್ಯ ಎಂದು ನುಡಿದರು ಎಕೆಪಿಎಯಿಂದ ನಡೆಸಿದ ಹಲವಾರು ಕಾರ್ಯಕ್ರಮಗಳ ಫೋಟೋಗಳು ಪತ್ರಿಕೆಗೆ ಲಭಿಸುತ್ತದ್ದು ಈ ಸಂಘಟನೆಯನ್ನು ಪ್ರಶಂಸಿಸಿದರು. ಬಳಿಕ ಅವರು ದೀಪಾವಳಿಯ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ‌ಪಡೆದ ರತೀಶ್ ರಾಮು ಅವರಿಗೆ ಸ್ಮರಣಿಕೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಕೆಪಿಎಯಲ್ಲಿ ಹಲವು ಹುದ್ದೆ ಅಲಂಕರಿಸಿದ ಹಿರಿಯ ಛಾಯಾಗ್ರಾಹಕ ಗೋವಿಂದನ್ ಚಂಗರಕ್ಕಾಡ್ ಅವರಿಗೆ ಸರ್ಟಿಫಿಕೇಟ್ ನೀಡಿದರು. ಈ ಸ್ಪರ್ಧೆಯಲ್ಲಿ ಪೋಷಕ ಬಹುಮಾನಗಳಿಸಿದ ಮನೀಶ್ ಸಿಗ್ನೇಚರ್ ಅವರಿಗೆ ಎಕೆಪಿಎ ಜಿಲ್ಲಾ ಫೋಟೋಗ್ರಫಿ ನೇಚರ್ ಕ್ಲಬ್ ಕೋರ್ಡಿನೇಟರ್ ಖ್ಯಾತ ಛಾಯಾಗ್ರಾಹಕ ಎರಡು ಸ್ಪರ್ಧೆಯ ತೀರ್ಪುಗಾರರಾದ ದಿನೇಶ್ ಇನ್ ಸೈಟ್ ಅವರು ಸ್ಮರಣಿಕೆ ನೀಡಿದರು ಬಳಿಕ ಮಾತನಾಡಿದ ಅವರು ಮೊದಲಿನ ಕಾಲದ ಬಹುಬೇಗನೆ ಬದಲಾದ ಈಗಿನ ಕಾಲಮಾನದ ಮೊಬೈಲ್ ಛಾಯಾಗ್ರಹಣದ ಕುರಿತು ಛಾಯಾಗ್ರಹಣದ ಮೇಲೆ ಬೀರಿದ ಬದಲಾವಣೆ ಎಂದರು.

ಅತಿಥಿಗಳಾಗಿ ಭಾಗವಹಿಸಿದ ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷರಾದ ವಾಮನ್ ಕುಮಾರ್ ಅವರು ವೆಸ್ಟ್ ಘಟಕವು ನಡೆಸಿಕೊಂಡು ಬರುವ ಕಾರ್ಯಕ್ರಮಗಳನ್ನು ಪ್ರಶಂಸನೆಗೈದರು. ಬಳಿಕ ಕೇರಳ ಪಿರವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾನಗರ ಘಟಕದ ಸನಲ್ ಅವರಿಗೆ ಸ್ಮರಣಿಕೆ, ಸೀರೆ ಹಾಗೂ ಸರ್ಟಿಫಿಕೇಟ್ ನೀಡಿದರು. ವಲಯ ಕಾರ್ಯದರ್ಶಿ ಶ್ರೀಮತಿ ಸರಿತಾ ಎಲ್ಲೋರ ಅವರು ದ್ವಿತೀಯ ಸ್ಥಾನಗಳಿಸಿದ ಕಾಸರಗೋಡಿನ ಕೃಷ್ಣ ಎಲ್ಲೋರ ಅವರಿಗೆ ಸ್ಮರಣಿಕೆ, ಸೀರೆ ಹಾಗೂ ಸರ್ಟಿಫಿಕೇಟ್ ನೀಡಿದರು.

ಈ ಸಂದರ್ಭದಲ್ಲಿ ಎಕೆಪಿಎ ಜಿಲ್ಲಾ ಸಮಿತಿ ಜತೆ ಕಾರ್ಯದರ್ಶಿ ಮನು ಎಲ್ಲೋರ, ಜಿಲ್ಲಾ ಸಮಿತಿ ಸದಸ್ಯ ಹಿರಿಯ ಛಾಯಾಗ್ರಾಹಕ ಮೈಂದಪ್ಪ ವಲಯ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ವಲಯ ಜತೆ ಕಾರ್ಯದರ್ಶಿ ಶ್ರೀ ಗಣೇಶ್ ರೈ, ಘಟಕದ ಉಪಾಧ್ಯಕ್ಷ ಅಭಿಷೇಕ್ ಸಿ, ಕೋಶಾಧಿಕಾರಿ ಅಮಿತ್, ಸಮಿತಿ ಸದಸ್ಯರುಗಳಾದ ನಾರಾಯಣನ್ ಟಿ, ವಾಸು ಎ, ಚಂದ್ರಶೇಖರ ಎಂ, ವಿಶಾಕ್, ಉದಯ ಲಾವಣ್ಯ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ಪ್ರಾಸ್ತಾವಿಕ ನುಡಿಗಳನ್ನಾಡಿ ಶ್ರೀಮತಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿ, ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ನಿರೂಪಿಸಿ ಪಿ ಆರ್ ಒ ವಿನೋದ್ ಕಲ್ಲಂಗೈ ಧನ್ಯವಾದ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!