ಕಾಲೇಜು ವಿದ್ಯಾರ್ಥಿ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರೇಮ ವಂಚನೆ ಪ್ರಕರಣದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ತನ್ನ ದ್ವಿಮುಖ ಧೋರಣೆ ಸಾಬೀತುಪಡಿಸಿದೆ :ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷ ಅನ್ವರ್ ಸಾದತ್

ಪುತ್ತೂರು:ಕಾಲೇಜು ವಿದ್ಯಾರ್ಥಿ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಪ್ರೇಮ ವಂಚನೆ ಪ್ರಕರಣದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ತನ್ನ ದ್ವಿಮುಖ ಧೋರಣೆ ಸಾಬೀತುಪಡಿಸಿದೆ. ಪುತ್ತೂರು ಪ್ರಕರಣದಲ್ಲಿ ಸಂಘ ಪರಿವಾರ ಸಂಪೂರ್ಣ ಬೆತ್ತಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಸಂಘ ಪರಿವಾರ ತನ್ನ ಹಿಂದುತ್ವ ಸಿದ್ಧಾಂತದ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು. ಒಂದೋ ನಾವು ಇನ್ನು ಮುಂದೆ ಹಿಂದುತ್ವ ಸಿದ್ಧಾಂತ ಪ್ರತಿಪಾದನೆ ಮಾಡುವುದಿಲ್ಲ ಎಂದು ಹೇಳಬೇಕು. ಅಥವಾ ಯಾವುದೇ ಪ್ರಕರಣದಲ್ಲಿ ಆರೋಪಿ ಮುಸ್ಲಿಂ ಆಗಿದ್ದಲ್ಲಿ ಮಾತ್ರ ನಾವು ಹಿಂದುತ್ವದ ಬಗ್ಗೆ ಮಾತನಾಡುತ್ತೇವೆ ಎಂದು ಸ್ಪಷ್ಟಪಡಿಸಬೇಕು. ಇವೆರಡೂ ಅಸಾದ್ಯ ಎಂದಾದರೆ ಅನ್ಯಾಯಕ್ಕೆ ಒಳಗಾಗಿರುವ ಯುವತಿಗೆ ಆರೋಪಿ ಯುವಕನ ಜತೆ ಮದುವೆ ಮಾಡಿಸುವ ಮೂಲಕ ಆಕೆಗೆ ನ್ಯಾಯ ಒದಗಿಸಬೇಕು ಎಂದು ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಎಸ್‍ಡಿಪಿಐ ತಿಳಿಸಿದೆ.

ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,ಪ್ರೇಮಿಸಿದ ಯುವತಿಗೆ ಮಗು ಕರುಣಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕೃಷ್ಣ ಜೆ. ರಾವ್ ಇನ್ನೂ ಕೂಡ ಸಂತ್ರಸ್ತೆಯನ್ನು ಮದುವೆಯಾಗಲು ಮುಂದೆ ಬಂದಿಲ್ಲ. ಇಂಥ ಪ್ರಕರಣದಲ್ಲಿ ಮುಸ್ಲಿಂ ಆರೋಪಿಯಾಗಿದ್ದರೆ ಮೈಮೇಲೆ ದೆವ್ವ ಬಂದಂತೆ ವರ್ತಿಸುವ ಬಿಜೆಪಿ, ಸಂಘ ಪರಿವಾರ ಈಗ ಮೌನಕ್ಕೆ ಜಾರಿವೆ. ಕಲ್ಲಡ್ಕ ಪ್ರಭಾಕರ ಭಟ್, ಅರುಣ್ ಕುಮಾರ್ ಪುತ್ತಿಲ, ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಯತ್ನಾಳ್, ಪ್ರಮೋದ್ ಮುತಾಲಿಕ್ ಮುಂತಾದವರು ಈಗೆಲ್ಲಿದ್ದಾರೆ? ಅವರೇಕೆ ಹಿಂದೂ ಹುಡುಗಿಗೆ ಆದ ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ? ಹಾಗಾದರೆ ಇವರ ಹಿಂದುತ್ವ ಎಲ್ಲಿ ಹೋಯಿತು? ಇವರು ಹಿಂದುತ್ವದ ವಿಚಾರದಲ್ಲಿ ನಾಟಕ ಮಾಡುತ್ತಿದ್ದಾರೆ. ಮುಸ್ಲಿಂ ಆರೋಪಿಯಾಗಿದ್ದರೆ ಮಾತ್ರ ಇವರಿಗೆ ಹಿಂದುತ್ವ ನೆನಪಾಗುವುದು. ಈಗ ಹಿಂದೂ ಯುವಕ ಆರೋಪಿಯಾಗಿದ್ದಾಗ ಹಿಂದು ಹುಡುಗಿಗೆ ಅನ್ಯಾಯ ಆಗಿರುವುದು ಕಾಣುತ್ತಿಲ್ಲವೇ ಎಂದರು.

ಪೊಲೀಸ್ ಕೇಸ್ ದಾಖಲಾಗಿ, ಆರೋಪಿ ಯುವಕ ಬಂದನವಾಗಿ, ಡಿಎನ್‍ಎ ಪರೀಕ್ಷೆಯಲ್ಲೂ ಪಿತೃತ್ವ ಸಾಬೀತಾದ ಮೇಲೂ ಇನ್ನೂ ಆ ಯುವಕನನ್ನು ಯಾಕೆ ಸಂಘ ಪರಿವಾರ ಶಿಕ್ಷಣ ಸಂಸ್ಥೆಯವರು ಕಾಲೇಜಿನಿಂದ ಡಿಬಾರ್ ಮಾಡುತ್ತಿಲ್ಲ? ಹೆಣ್ಣಿಗೆ ಗೌರವ ಕೊಡದ ಸಮಾಜ ಸಮಾಜವೇ ಅಲ್ಲ ಎಂದು ಹೇಳಿದ ಸ್ವಾಮಿ ವಿವೇಕಾನಂದರ ಆದರ್ಶವನ್ನು ಇವರು ನಿಜಕ್ಕೂ ಪಾಲಿಸುತ್ತಿದ್ದರೆ ಆರೋಪಿಯನ್ನು ತಕ್ಷಣ ಕಾಲೇಜಿನಿಂದ ಡಿಬಾರ್ ಮಾಡಬೇಕಿತ್ತಲ್ಲವೇ? ರಾಷ್ಟ್ರೀಯತೆ, ಹಿಂದುತ್ವ, ಸಂಸ್ಕøತಿ ಕಲಿಸುತ್ತೇವೆ ಎನ್ನುವ ಇವರ ಮಾತಿಗೆ ಎಲ್ಲಿದೆ ಅರ್ಥ ಎಂದವರು ಕೇಳಿದರು.

ಉಪಾಧ್ಯಕ್ಷ ಮೋನಿಷ್ ಆಲಿ ಮಾತನಾಡಿ, ಸಂತ್ರಸ್ತ ಯುವತಿಯ ಪರ ಯಾರೂ ನಿಲ್ಲದಿದ್ದಾಗ ಎಸ್‍ಡಿಪಿಐ ಕಳೆದ ಜುಲೈ 2ರಂದು ಪ್ರತಿಭಟನೆ ಮಾಡಿತ್ತು. ಯುವತಿಯ ತಾಯಿ ಪಾಲ್ಗೊಂಡಿದ್ದರು. ಆಗ ದಿಢೀರ್ ಎಚ್ಚೆತ್ತುಕೊಂಡ ಸಂಘ ಪರಿವಾರದ ಮುಖಂಡರು, ಹಿಂದೂ ಹುಡುಗಿ ವಿಚಾರದಲ್ಲಿ ಎಸ್‍ಡಿಪಿಐ ತಲೆ ಹಾಕುವ ಅಗತ್ಯವಿಲ್ಲ. ಆಕೆಗೆ ನಾವು ನ್ಯಾಯ ಕೊಡಿಸುತ್ತೇವೆ ಎಂದು ಹೇಳಿದ್ದರು. ಹಾಗಾಗಿ ನಾವು ಸುಮ್ಮನಾದೆವು. ಈಗ 6 ತಿಂಗಳು ಕಳೆದರೂ ಯುವತಿಗೆ ನ್ಯಾಯ ಸಿಕ್ಕಿಲ್ಲ. ಹಾಗಾದರೆ ಹಿಂದುತ್ವವಾದಿ ನಾಯಕರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಎಸ್‍ಡಿಪಿಐ ಈಗ ಮತ್ತೊಮ್ಮೆ ಯುವತಿ ಪರ ಹೋರಾಟಕ್ಕೆ ಇಳಿಯಲಿದೆ. ನಾವು ಸಂತ್ರಸ್ತೆಯನ್ನು ವಿಧಾನ ಸೌಧ ಎದುರು ಕೂರಿಸಿ ಪ್ರತಿಭÀಟನೆ ಮಾಡಲೂ ಹಿಂಜರಿಯುವುದಿಲ್ಲ ಎಂದವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಪುತ್ತೂರು ಕ್ಷೇತ್ರ ಅಧ್ಯಕ್ಷ ಅಶ್ರಫ್ ಬಾವಾ,ಉಪಾಧ್ಯಕ್ಷ ಮೋನಿಷ್ ಆಲಿ, ಜತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸುಳ್ಯ ಕ್ಷೇತ್ರದ ಮುಖಂಡ ಬಾಬು ಸವಣೂರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!