ಬಂದ್ಯೋಡ್ ಮುಟ್ಟಂ ರಾ.ಹೆದ್ದಾರಿಯಲ್ಲಿ ವ್ಯಕ್ತಿಗೆ ಕಾರು ಡಿಕ್ಕಿ ಅಪಘಾತದಲ್ಲಿ ಮುಟ್ಟಂ ನಿವಾಸಿ ದಾರುಣ ಸಾವು

ಮಂಜೇಶ್ವರ : ಬಂದ್ಯೋಡ್ ಮುಟ್ಟಂ ರಾ. ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿರುವ ಮಧ್ಯೆ ಕಾರು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಮನೆ ಯಜಮಾನ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮುಟ್ಟಂ ನಿವಾಸಿ ಅಬೂಬಕ್ಕರ್ ಹಾಜಿ (70) ಸಾವನ್ನಪ್ಪಿದ ದುರ್ದೈವಿ.
ಬಾನುವಾರ ಸಂಜೆ 3 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಆರಿಕ್ಕಾಡಿ ಮಖಾಂ ಉರೂಸ್ ನ ಸಮಾರೋಪ ಸಮಾರಂಭಕ್ಕೆ ತೆರಳಿ ಮರಳುತ್ತಿರುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವೃತೆಗೆ ರಸ್ತೆಗೆಸೆಯಲ್ಪಟ್ಟ ಅಬೂಬಕ್ಕರ್ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರು ನಿಲ್ಲಿಸದೆ ಪರಾರಿಯಾಗಿ ಬಳಿಕ ಹೊಸಂಗಡಿಯಲ್ಲಿ ಹೈವೇ ಪೆಟ್ರೋಲಿಂಗ್ ಪೊಲೀಸರು ಕಾರನ್ನು ವಶಕ್ಕೆ ತೆಗೆದಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!