ಸಂಗೀತ ಲೋಕದ ಗಾನಕೋಗಿಲೆ ಕೆ. ಎಸ್. ಚಿತ್ರ ಅವರಿಗೆ ಇಂದು 63ನೇ ಜನ್ಮದಿನ

ಸಂಗೀತ ಲೋಕದ ಗಾನಕೋಗಿಲೆ ಕೆ. ಎಸ್. ಚಿತ್ರ ಅವರಿಗೆ ಇಂದು 63ನೇ ಜನ್ಮದಿನ
ನಾಲ್ಕು ದಶಕಗಳಿಂದ ಮಧುರ ಕಂಠದ ಮೂಲಕ ಸಂಗೀತಾಸಕ್ತರ ಮನಸೂರೆಗೊಂಡ ದಿಗ್ಗಜ ಹಿನ್ನೆಲೆ ಗಾಯಕಿಗೆ ಶುಭಾಶಯಗಳ ಮಹಾಪೂರ

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಮಧುರ ಕಂಠದ ಮೂಲಕ ಸಂಗೀತಾಸಕ್ತರ ಮನಸ್ಸನ್ನು ಸ್ಪರ್ಶಿಸುತ್ತಾ ಬಂದಿರುವ ಸಂಗೀತ ಲೋಕದ ಗಾನಕೋಗಿಲೆ ಕೆ. ಎಸ್. ಚಿತ್ರ ಅವರಿಗೆ ಇಂದು 63ನೇ ಜನ್ಮದಿನ.

ಆಳವಾದ ಭಾವ, ವಿಶಾಲ ಸಂಗೀತ ಜ್ಞಾನ ಮತ್ತು ಹೃದಯಸ್ಪರ್ಶಿ ಗಾಯನವೇ ಕೆ. ಎಸ್. ಚಿತ್ರ ಅವರ ವಿಶಿಷ್ಟ ಗುರುತು. ಅವರ ಕಂಠದಿಂದ ಹರಿದುಬರುವ ಪ್ರತಿಯೊಂದು ಗೀತೆ ಪ್ರೀತಿ, ವಿರಹ, ದುಃಖ, ಭಕ್ತಿ ಹಾಗೂ ಭಾವನೆಗಳನ್ನು ಜೀವಂತವಾಗಿ ಶ್ರೋತೃಗಳ ಮನಸ್ಸಿಗೆ ತಲುಪಿಸುವ ಶಕ್ತಿಯನ್ನು ಹೊಂದಿದೆ.

ಕಳೆದ ನಾಲ್ಕು ದಶಕಗಳಿಂದ ಅವರ ಸಂಗೀತಯಾನ ನಿರಂತರವಾಗಿ ಸಾಗುತ್ತಿದ್ದು, ಸಂಗೀತ ಪ್ರಿಯರ ಹೃದಯದಲ್ಲಿ ಅಚ್ಚಳಿಯದ ಸ್ಥಾನವನ್ನು ಗಳಿಸಿದೆ. ಹಾಡಿನ ಪಾತ್ರಗಳ ಭಾವನೆಗಳನ್ನು ಅರ್ಥಮಾಡಿಕೊಂಡು ಅದನ್ನು ತಮ್ಮ ಗಾಯನದಲ್ಲಿ ಜೀವಂತಗೊಳಿಸುವ ಅಪರೂಪದ ಸಾಮರ್ಥ್ಯ ಚಿತ್ರ ಅವರದ್ದು.

ಮಲಯಾಳದಲ್ಲಿ ‘ವಾನಂಬಾಡಿ’ (ಗಾನಕೋಗಿಲೆ) ಎಂದು ಖ್ಯಾತರಾಗಿರುವ ಚಿತ್ರ, ತಮಿಳುನಾಡಿನಲ್ಲಿ ‘ಚಿನ್ನ ಕುಯಿಲ್’, ತೆಲುಗಿನಲ್ಲಿ ‘ಸಂಗೀತ ಸರಸ್ವತಿ’, ಉತ್ತರ ಭಾರತದಲ್ಲಿ ‘ಪಿಯಾ ಬಸಂತಿ’, ಹಾಗೂ ಕರ್ನಾಟಕದಲ್ಲಿ ‘ಕನ್ನಡ ಕೋಗಿಲೆ’ ಎಂಬ ಬಿರುದುಗಳಿಂದ ಗೌರವಿಸಲ್ಪಟ್ಟಿದ್ದಾರೆ.

ಮಲಯಾಳಂ ತಮಿಳು, ಹಿಂದಿ, ತೆಲುಗು, ಕನ್ನಡ, ಒರಿಯಾ, ಬಂಗಾಳಿ, ಅಸ್ಸಾಮಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ 15,000ಕ್ಕೂ ಹೆಚ್ಚು ಹಾಡುಗಳಿಗೆ ಅವರು ಧ್ವನಿಯಾಗಿದ್ದು, ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!